ಮುಂಬಯಿ: ಸಮಾಜದಲ್ಲಿ ಹೆಣ್ಣಿಗೆ ಸದೃಶ್ಯತೆಕಲ್ಪಿಸಿದಾಗ ಅವಳ ಗುರಿ ಹೆಚ್ಚು ಪ್ರಬಲವಾಗುತ್ತದೆಸಮಾನತೆಯಿಂದ ಮಾತ್ರ ಸ್ತ್ರೀ ಶಕ್ತಿ ಸಶಕ್ತವಾಗಲು ಸಾಧ್ಯ. ಆತ್ಮಸ್ತ್ಯರ್ಯ ಮತ್ತು ಛಲದಿಂದ ಮಾತ್ರಮಹಿಳೆಯರು ಆಯ್ದ ಗುರಿ ತಲುಪಲು ಸಾಧ್ಯ ಎಂದು ಅರ್ಥ್ ಕ್ರಾಪ್ ಬಯೋ ಫರ್ಟಿಲೈಸರ್ ಇದರ ನಿರ್ದೇಶಕಿ ಡಾ| ಕೃಷ್ಣಾ ಯು.ಪೈ ತಿಳಿಸಿದರು.

IMG-20210316-WA0086
ಕಳೆದ ಭಾನುವಾರ ಅಪರಾಹ್ನ ಮಾಟುಂಗಾ ಪೂರ್ವದ ಬಾವುದಾಜಿ ರಸ್ತೆಯಲ್ಲಿನ ಮೈಸೂರುಅಸೋಸಿಯೇಶನ್‌ನ ಸಭಾಗೃಹದಲ್ಲಿ ಮುಂಬಯಿ ಕನ್ನಡ ಸಂಘದಮಹಿಳಾ ವಿಭಾಗವು ವಾರ್ಷಿಕ ಸ್ನೇಹಸಮ್ಮಿಲನ, ಮಹಿಳಾ ಕವಿಗೋಷ್ಠಿ, ಪುಸ್ತಕ ಬಿಡುಗಡೆ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿಮುಖ್ಯ ಅತಿಥಿಯಾಗಿದ್ದು ದೀಪ ಪ್ರಜ್ವಲಿಸಿ ಸ್ನೇಹ ಸಮ್ಮಿಲನಉದ್ಘಾಟಿಸಿ ಡಾ| ಕೃಷ್ಣಾಮಾತನಾಡಿದರು.IMG-20210316-WA0084

ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಜಿ.ಎಸ್ ನಾಯಕ್ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಚಂದ್ರಶೇಖರ್ ಮೇಮೋರಿಯಲ್ ಟ್ರಸ್ಟ್ ಭಾಂಡೂಪ್ ಇದರ ಅಧ್ಯಕ್ಷೆ ಶ್ರೀದೇವಿ ಸಿ.ರಾವ್, ಜಿಎಸ್‌ಬಿ ಸಭಾ ಮಹಿಳಾ ಕಿಂಗ್‌ಸರ್ಕಲ್ ಇದರ ಮಾಜಿ ಮಹಿಳಾಧ್ಯಕ್ಷೆ ಶಾಂತೇರಿ ಎನ್.ನಾಯಕ್ ಉಪಸ್ಥಿತರಿದ್ದು ಮುಂಬಯಿ ಕನ್ನಡ ಲೇಖಕಿ ಮತ್ತುಕವಿಯತಿ ಡಾ| ದಾಕ್ಷಾಯಿಣಿ ಯಡಹಳ್ಳಿ ರಚಿತ `ಜನ ಮಾನಸದಲ್ಲಿ ಅಕ್ಕ ಹಾಗೂ ಮೀರಾ’ ಕೃತಿಯನ್ನು ಜಿ.ಎಸ್ ನಾಯಕ್ ಬಿಡುಗಡೆಗೊಳಿಸಿದರು.IMG-20210316-WA0085

ಸ್ನೇಹ ಸಮ್ಮಿಲನದ ಅಂಗವಾಗಿ ಮುಂಬಯಿಯ ಹಿರಿಯ ಲೇಖಕಿ ಡಾ| ಸುಮಾ ದ್ವಾರಕನಾಥ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಸಲ್ಪಟ್ಟಿದ್ದು, ಕಲ್ಪನೆಗಳು ಸಾಹಿತ್ಯ ರೂಪ ತಾಳಿದಾಗ ಕವನ ಮತ್ತು ಕವಿತೆಯಾಗಿ ಹೊರಬೀಳುತ್ತದೆ ಎಂದೇಳಿ ಅರ್ಥಪೂರ್ಣವಾದ ಸಾಹಿತ್ಯವನ್ನು ರಚಿಸಿ ಹಾಡಿದ ಎಲ್ಲಾ ಕವಯತ್ರಿಯರಿಗೆ ಡಾ| ಸುಮಾ ಶುಭ ಹಾರೈಸಿದರು. ಡಾ| ದಾಕ್ಷಾಯಣಿ ಯಡಹಳ್ಳಿ, ಶಾಂತಾ ಶಾಸ್ತ್ರೀ ಸರೋಜಾ ಅಮಾತಿ, ಲಲಿತಾ ಅಂಗಡಿ, ಕುಮುದಾ ಶೆಟ್ಟಿ, ಶಾರದಾ ಅಂಬೇಸಗೆ ವಸಂತಾ ಚಂದ್ರಶೇಖರ್ ಮತ್ತು ಅರ್ಚನಾ ಪೂಜಾರಿ ಪಾಲ್ಗೊಂಡು ತಮ್ಮ ಸ್ವರಚಿತ ಕವನಗಳನ್ನು ಪ್ರಸ್ತುತ ಪಡಿಸಿದರು.

ಕನ್ನಡಭಾಷಾ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನಹಾಗೂ ೨೦೧೯-೨೦ನೇ ಸಾಲಿನ `ಕನ್ನಡ ಸರ್ಟಿಫಿಕೇಟ್’ ಕೋರ್ಸ್ನವಿದ್ಯಾರ್ಥಿಗಳಿಗೆ ಅತಿಥಿsಗಳು ಪ್ರಮಾಣಪತ್ರಪ್ರದಾನಿಸಿ ಅಭಿನಂದಿಸಿದರು. ಮಹಿಳೆ ತನ್ನನ್ನು ತಾನು ಮೊದಲು ಅರ್ಥ್ಯೆಸಿ ಗೌರವಿಸಬೇಕು.ತನ್ನ ಕಾರ್ಯ ಚಟುವಟಿಕೆಯಿಂದ ಸಮಾಜಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಶ್ರೀದೇವಿ ರಾವ್‌ನುಡಿದರು.

ಶಾಂತೇರಿ ನಾಯಕ್ ಮಾತನಾಡಿ ಮಹಿಳೆ ಎಲ್ಲ ಕ್ಷೇತ್ರದಲ್ಲೂ ಪ್ರಬಲವಾಗಿ ಸಾಗುತ್ತಿದ್ದಾಳೆ.ಅವಳಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಧರ್ಮ ಎಂದರು. ಜಿ.ಎಸ್ ನಾಯಕ್ ಅಧ್ಯಕ್ಷೀಯ ನುಡಿಗಳನ್ನಾಡಿ ಸಂಘದ ಇತಿಹಾಸ ತಿಳಿಸುತ್ತಾ ಮಹಿಳಾ ವಿಭಾಗದವರು ನಡೆಸುತ್ತಿರುವ ಎಲ್ಲ ಕಾರ್ಯಕ್ರಮಗಳೂ ಜನಹಿತ ಮತ್ತು ಮಹಿಳಾ ಪ್ರೋತ್ಸಾಹಿಕವಾಗಿವೆ. ಮುಂಬಯಿ ಕನ್ನಡಸಂಘದ ಕಟ್ಟಡದ ಪುನರ್ ನಿರ್ಮಾಣ ಯೋಜನೆಗೆ ಎಲ್ಲ ಕನ್ನಡಿಗರೂ ತನುಮನಧನಹಾಗೂ ಸಾಂಘಿಕವಾಗಿ ಸಹಕಾರ ನೀಡಬೇಕೆಂದರು.

ಮುಂಬಯಿ ಕನ್ನಡ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಡಾ| ರಜನಿ ವಿ.ಪೈ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಮಹಿಳೆ ತನ್ನ ನಡೆ ಮತ್ತು ನುಡಿ ಇಂದ ಆತ್ಮಾಭಿಮಾನವನ್ನು ಬೆಳೆಸಿ ಆಶಾವಾದಿಯಾಗಿ ಮುನ್ನಡೆಯಬೇಕು. ಹೆಣ್ಣು ಮತ್ತೊಂದು ಹೆಣ್ಣನ್ನು ಗೌರವಿಸುವ ಮೂಲಕ ಸಮಾಜಕ್ಕೆ ಸಹಬಾಳ್ವೆಯ ಅರ್ಥವನ್ನು ಸಾರಬೇಕು ಎಂದು ಮಹಿಳೆಯರನ್ನು ಪ್ರೋತ್ಸಾಹಿಸಿದರು.

ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಶಶಿಧರ್ ಕೆ.ಪೈ ಮತ್ತುರಜನಿ ಶಶಿಧರ್ ಬಳಗವು `ಧುನ್ ಮೆಲೋಡಿಸ್’ ಸಂಗೀತ ರಸಮಂಜರಿ ಸಾದರಪಡಿಸಿದ್ದುಅಜಯ್ ಪ್ರಭು, ಅನುಪಮಾ ಗುಪ್ತಾಸಾಥ್ ನೀಡಿದರು. ಶಾರದಾ ಅಂಬೆಸAಗೆಮನೋರAಜನಾ ಕಾರ್ಯಕ್ರಮ ನಿರ್ವಾಹಿಸಿದರು.

ಸಂಘದ ನಾರಾಯಣ ರಾವ್, ಸಂಧ್ಯಾ ಪ್ರಭು, ಎಸ್.ಕೆ ಪದ್ಮನಾಭಮತ್ತಿತರರು ಉಪಸ್ಥಿತರಿದ್ದು, ವಿಜಯಾ ಗೌಡ ಭಾವಗೀತೆಯನ್ನಾಡಿದರು. ಗುರುನಾರಾಯಣ ರಾತ್ರಿ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನಾಡಿದರು. ಶ್ರದ್ಧಾ ವಿನೋದ್ ಅತಿಥಿಗಳನ್ನು ಪರಿಚಯಿಸಿದರು. ನರ್ಮದಾ ಎಸ್ ಕಿಣಿ ಕಾರ್ಯಕ್ರಮ ನಿರೂಪಿಸಿದರು. ಪ್ರಫುಲ್ಲಾ ರಾವ್ ವಂದನಾರ್ಪಣೆಗೈದರು.

ಚಿತ್ರ ವರದಿ : ರೊನಿಡಾ ಮುಂಬಯಿ

 

By suddi9

Leave a Reply

Your email address will not be published. Required fields are marked *