ಶ್ರೀನಿವಾಸಪುರ : ಅಧಿಕಾರಿಗಳು ಬಡವರ ಹೊಟ್ಟೆ ಹೊಡೆಯುವುದು ಒಳ್ಳೆಯದಲ್ಲ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು .ಪಟ್ಟಣದ ಹೊರ ವಲಯದ ಪುಂಗನೂರು ಕ್ರಾಸ್ ಸಮೀಪ ಕೆಲವರು ರಸ್ತೆ ಬದಿಯಲ್ಲಿ ನಿರ್ಮಿಸಿಕೊಂಡಿದ್ದ ಅಂಗಡಿಗಳನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತೆರವುಗೊಳಿರುವುದನ್ನು ಶುಕ್ರವಾರ ನೋಡಿದ ಬಳಿಕ ಮಾತನಾಡಿದ ಅವರು  ಐದು ಮಂದಿ ಬಡವರ ರಸ್ತೆ ಅಂಚನ್ನು ಬಿಟ್ಟು ಅಂಗಡಿ ಮಳಿಗೆ ನಿರ್ಮಿಸಿಕೊಂಡು , ಕೆಲವು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದರು .d2fa8de2-01ae-4834-8848-103f8d8274f0

d0cc7464-1014-469d-b7d7-a1f030c9ea9bಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೈಗೊಂಡಿರುವ ವಿವೇಚನಾರಹಿತ ಕ್ರಮದಿಂದಾಗಿ ಅವರ ತುತ್ತಿಗೆ ಕಲ್ಲುಬಿದ್ದಂತಾಗಿದೆ ಎಂದು ಹೇಳಿದರು . ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಕೆ.ಹುಸೇನ್ ಸಾಬ್ , ಎಂಜಿನಿಯರ್‌ಗಳಾದ ಎಲ್.ಎಂ.ನಾಗರಾಜ್ , ನಾಗರಾಜ್ , ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ,ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ , ಗೋಪಾಲರೆಡ್ಡಿ , ವೇಣು , ರಾಮಾಂಜಮ್ಮ , ಈರಪ್ಪ , ಶ್ರೀನಿವಾಸ್ , ಹರೀಶ್ ಯಾದವ್ , ಅಂಗಡಿ ಕಳೆದುಕೊಂಡಿರುವ ಶ್ರೀರಾಮರೆಡ್ಡಿ , ಮಂಜುನಾಥ್ , ಸುಶೀಲಮ್ಮ , ಉಮಾಶ್ರೀ , ಸರಸ್ವತಮ್ಮ ಇದ್ದರು .

By suddi9

Leave a Reply

Your email address will not be published. Required fields are marked *