ಕೋಲಾರ: ತಾಲ್ಲೂಕಿನ ಕ್ಯಾಲನೂರು ಹೋಬಳಿ ಮಡಿವಾಳ ಗ್ರಾಮದ ಜೆಡಿಎಸ್ ಹಿರಿಯ ಮುಖಂಡ ಹಾಗೂ ದಿವಂಗತ ಸಿ.ಬೈರೇಗೌಡರ ಅನುಯಾಯಿಯಾಗಿದ್ದ ರಾಜಣ್ಣ ಅವರ ಪುತ್ರ ಆರ್.ಚೌಡೇಗೌಡ(೪೨) ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ 04 ರಂದು ಭಾನುವಾರ ವಿಧಿವಶರಾಗಿದ್ದು, ಪತ್ನಿ,ಮಕ್ಕಳನ್ನು ಅಗಲಿದ್ದಾರೆ.
ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಬ್ರೈನ್ ಟೂಮರ್ಗೆ ಒಳಗಾಗಿ ಗುಣಮುಖರಾಗಿದ್ದ ಅವರು ನಂತರ ಅಸ್ವಸ್ಥರಾಗಿ ಎಂ.ವಿ.ಜೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ಅಂತ್ಯ ಸಂಸ್ಕಾರದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ, ಎಂಎಲ್ಸಿ ಗೋವಿಂದರಾಜು, ಮುಖಂಡರಾದ ಮೂರಾಂಡಹಳ್ಳಿ ಗೋಪಾಲ್, ಚೆಲುವನಹಳ್ಳಿ ನಾಗರಾಜ್ ಮತ್ತಿತರರು ಹಾಜರಿದ್ದು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು.