ಬಂಟ್ವಾಳ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರೂ 14 ಕೋಟಿ ಅನುದಾನದಲ್ಲಿ ಡಾಮರೀಕರಣಗೊಂಡ ಗೊಳ್ತಮಜಲು-ಮಂಚಿಕಟ್ಟೆ ರಸ್ತೆಯ ಇಕ್ಕೆಲಗಳಲ್ಲಿ 75ನೇ ಸ್ವಾತಂತ್ರ್ಯೊತ್ಸವದ ಅಂಗವಾಗಿ ಸಾಲುಮರ ಬೆಳೆಸುವ ಅಭಿಯಾನ ನಡೆಯುತ್ತಿದ್ದು. ಈ ನಿಟ್ಟಿನಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಗಿಡ ನೆಡುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಗೋಳ್ತಮಜಲು ಗ್ರಾ.ಪಂ ಅಧ್ಯಕ್ಷ ಅಭಿಷೇಕ್ ಶೆಟ್ಟಿ, ವೀರಕಂಭ ಗ್ರಾ.ಪಂ ಸದಸ್ಯರಾದ ದಿನೇಶ್ ಪೂಜಾರಿ, PMGSY ಇಂಜಿನಿಯರ್ ಪ್ರಸನ್ನ, ಗುತ್ತಿಗೆದಾರ ಪ್ರೇಮನಾಥ, ಸಾಮಾಜಿಕ ಅರಣ್ಯ ಇಲಾಖೆಯ ರವಿಕುಮಾರ್, ಬಿಜೆಪಿ ಬಂಟ್ವಾಳ ಕಾರ್ಯದರ್ಶಿ ಗಣೇಶ್ ರೈ ಮಾಣಿ ಉಪಸ್ಥಿತರಿದ್ದರು.
\