ಬಂಟ್ವಾಳ:ಪ್ರಸಕ್ತ ಕೋವಿಡ್ ಸಂಕಷ್ಟದ ಪರಿಣಾಮ ಕೃತಕ ಆಮ್ಲಜನಕಕ್ಕೆ ಬದಲಾಗಿ ಪ್ರಕೃತಿದತ್ತ ಆಮ್ಲಜನಕದ ಮಹತ್ವ ಜನತೆಗೆ ಅರಿವಾಗಿದೆ ಎಂದು ಲೊರೆಟ್ಟೋಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ಹೇಳಿದ್ದಾರೆ.

ಇಲ್ಲಿನ ಚಿಣ್ಣರಲೋಕ ಸೇವಾ ಬಂಧು ಮತ್ತು ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ವತಿಯಿಂದ ಬಿ.ಸಿ.ರೋಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಬಳಿ ಗುರುವಾರ ಏರ್ಪಡಿಸಿದ್ದ ವನಮಹೋತ್ಸವ-೨೦೨೧ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಿಣ್ಣರಲೋಕ ಸೇವಾ ಟ್ರಸ್ಟ್ ಅಧ್ಯಕ್ಷ ಸುದರ್ಶನ್ ಜೈನ್ ಪಂಜಿಕಲ್ಲು, ಗೌರವಾಧ್ಯಕ್ಷ ವಕೀಲ ಜಯರಾಮ ರೈ ವಿಟ್ಲ, ಗೌರವ ಸಲಹೆಗಾರ ಮಂಜು ವಿಟ್ಲ, ನಿರ್ದೇಶಕರಾದ ಸರಪಾಡಿ ಅಶೋಕ ಶೆಟ್ಟಿ, ಪದ್ಮನಾಭ ಮಯ್ಯ ಏಲಬೆ ಮತ್ತಿತರರು ಇದ್ದರು.
ಸೇವಾ ಬಂಧು ಸಂಚಾಲಕ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ ಸ್ವಾಗತಿಸಿದರು. ಅಧ್ಯಕ್ಷ ಮೋಹನದಾಸ ಕೊಟ್ಟಾರಿ ಪ್ರಾಸ್ತಾವಿಕ ಮಾತನಾಡಿದರು. ಇಬ್ರಾಹಿಂ ಕೈಲಾರ್ ವಂದಿಸಿದರು. ವಕೀಲೆ ಶೈಲಜಾ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.