ಮೂಡುಬಿದರೆ: ಕಳೆದ ಏಷ್ಯಾಡ್ ಕ್ರೀಡಾ ಕೂಟದಲ್ಲಿ ಕಬಡ್ಡಿ ಮತ್ತು ರಿಲೇಯಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಕ್ರೀಡಾಪಟುಗಳಾದ ಮಮತಾ ಪೂಜಾರಿ ಮತ್ತು ಪೂವಮ್ಮ ದ.ಕ ಜಿಲ್ಲೆಗೆ ಕೀತರ್ಿಯನ್ನು ತಂದಿದ್ದಾರೆ. ಈ ಸಾಧನೆ ದೀಪಾವಳಿಯ ಸಂಭ್ರಮದ ಜತೆಗೆ ಜಿಲ್ಲೆಯ ಮೂಲಕ ದೇಶಕ್ಕೆ ಹೊಸಬೆಳಕನ್ನು ನೀಡಿದಂತಾಗಿದೆ ಎಂದು ಶ್ರೀ ಜೈನ ಮಠದ ಚಾರುಕೀತರ್ಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಅಭಿಪ್ರಾಯಪಟ್ಟರು.
ಅಲಂಗಾರಿನ ಪಂಡಿತ್ ಹೆಲ್ತ್ ರೆಸಾಟರ್್ ಆ್ಯಂಡ್ ಸ್ಪಾ ದಲ್ಲಿ `ಚಿನ್ನದ ಕ್ರೀಡಾ ತಾರೆ’ಯರ ಅಭಿನಂಧನಾ ಸಮಾರಂಭದಲ್ಲಿ ಅವರು ಸಾಧಕಿಯರಾದ ಮಮತಾ ಪೂಜಾರಿ ಮತ್ತು ಪೂವಮ್ಮ ಅವರನ್ನು ಸಮ್ಮಾನಿಸಿ ಶುಭಹಾರೈಸಿದರು.
ಒಲಂಪಿಕ್ಸ್ ನಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಸಾಧನೆ ಮಾಡಲಿ: ಭಟ್ಟಾರಕ ಶ್ರೀ
ಮಹಿಳೆಯರ ಸಾಧನೆಗೆ ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀರರಾಣಿ ಅಬ್ಬಕ್ಕನಿಂದ ಸಾವಿರ ಕಂಬದ ಬಸದಿಗೆ ಕೊಡುಗೆ ಸಲ್ಲಿಸಿರುವ ಬೈರಾದೇವಿ ಮೊದಲಾದ ವೀರ ವನಿತೆಯರ ಕೊಡುಗೆ ಅವಿಸ್ಮರಣೀಯವಾಗಿದೆ. ಇದೀಗ ಕ್ರೀಡಾ ರಂಗದಲ್ಲಿ ಇಬ್ಬರು ವನಿತೆಯರ ಈ ಚಿನ್ನದ ಸಾಧನೆ ಹೊಸ ಇತಿಹಾಸ ಬರೆದ್ದಾರೆ. ಮುಂದಿನ ಒಲಂಪಿಕ್ಸ್ನಲ್ಲಿಯೂ ಜಿಲ್ಲೆಯ ಕ್ರೀಡಾಪಟುಗಳು ಸಾಧನೆಯ ಮೂಲಕ ಕೊಡುಗೆ ನೀಡುವಂತಾಗಲಿ ಎಂದವರು ಹಾರೈಸಿದರು.

ಪಂಡಿತ್ ಹೆಲ್ತ್ ರೆಸಾಟರ್್ ಆ್ಯಂಡ್ ಸ್ಪಾದ ಪ್ರವರ್ತಕ ಲಾಲ್ ಗೋಯೆಲ್ ಸಮಾರಂಭದಲ್ಲಿ ಮಾತನಾಡಿ
ಹೊರರಾಜ್ಯಗಳು ಪದಕ ಗೆದ್ದ ಕ್ರೀಡಾಪಟುಗಳಿಗೆ ಕೋಟಿಗಟ್ಟಲೆ ರೂ ಬಹುಮಾನ ನೀಡುತ್ತಿರುವಾಗ ರಾಜ್ಯ ಸಕರ್ಾರದ ನೆರವು ಪ್ರೋತ್ಸಾಹದಾಯಕವಾಗಿಲ್ಲ ಎಂದರು.
ಸಮ್ಮಾನಕ್ಕೆ ಪ್ರತಿಕ್ರಿಯೆ ನೀಡಿದ ಮಮತಾ ಪೂಜಾರಿ ತನ್ನ ಹೆತ್ತವರು ಮತ್ತು ಇದೀಗ ಪತಿ ನೀಡುತ್ತಿರುವ ಪ್ರೊತ್ಸಾಹವೇ ಸಾಧನೆಗೆ ಮೂಲ ಕಾರಣ ಎಂದರು. ಕ್ರಿಕೆಟ್ ಹೊರತುಪಡಿಸಿ ಕ್ರೀಡಾಪಟುಗಳಿಗೆ ನೀಡುತ್ತಿರುವ ಪ್ರೋತ್ಸಾಹದಿಂದ ಸಂತಸವಾಗಿದೆ. ಈ ನೆರವು ಎಲ್ಲ ಕ್ರೀಡಾಪಟುಗಳಿಗೂ ಸಿಗುವಂತಾಗಲಿ ಎಂದವರು ಹಾರೈಸಿದರು.
ಅಥ್ಲೇಟ್ ಪೂವಮ್ಮ ಮಾತನಾಡಿ ಚಿನ್ನ ಗೆದ್ದಾಗ ಎಲ್ಲರೂ ಅಭಿನಂದಿಸುತ್ತಿದ್ದಾರೆ. ಆದರೆ ಇದಕ್ಕಾಗಿ ಸಾಗಿ ಬಂದ ಕಠಿಣ ಹಾದಿಯಲ್ಲಿಯೂ ಪ್ರೋತ್ಸಾಹ ಸಿಗಬೇಕಿತ್ತು. ತನ್ನ ಸಾಧನೆಗೆ ಹೆತ್ತವರು ಮತ್ತು ಸಹೋದರನ ಸಹಕಾರವೇ ಕಾರಣ ಎಂದರು.
ಆಲಂಗಾರ್ ಚಚರ್್ನ ಧರ್ಮಗುರು ರೆ.ಫಾ. ಬೇಸಿಲ್ ವಾಸ್, ಆಲಂಗಾರು ಈಶ್ವರ ದೇವಸ್ಥಾನದ ಈಶ್ವರ ಭಟ್, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ, ಅಜರ್ುನ ಪ್ರಶಸ್ತಿ (1974) ವಿಜೇತ ಕ್ರೀಡಾಪಟು ಮಂಗಳೂರಿನ ಮಂಜರಿ ಭಾರ್ಗವ್, ವಕೀಲ ರಂಜನ್ ರಾವ್, ಜೆಟ್ ಏರ್ ವೇಸ್ನ ಅರ್ಚನಾ, ಪುರಸಭಾ ಸದಸ್ಯ ರತ್ನಾಕರ ದೇವಾಡಿಗ, ಪಿ.ಕೆ.ಥಾಮಸ್,, ಉದ್ಯಮಿ ಅಬುಲ್ ಅಲಾ ಮತ್ತಿತರರು ಉಪಸ್ಥಿತರಿದ್ದರು. ರೀಟಾ ಡೆಸಾ ಮತ್ತು ಗ್ರೇಸಿ ಡಿಸಿಲ್ವಾ ಕಾರ್ಯಕ್ರಮ ನಿರ್ವಹಿಸಿದರು.