ಬಂಟ್ವಾಳ: ಬಂಟ್ವಾಳ-ಮೂಡಬಿದಿರೆ ಹೆದ್ದಾರಿಯ ಸಿದ್ಧಕಟ್ಟೆ ಸಮೀಪ ಲಾರಿ ಹಾಗೂ ಗೂಡ್ಸ್ ಪಿಕಪ್ ಪರಸ್ಪರ ಢಿಕ್ಕಿಯಾಗಿ ಪಿಕಪ್ನಲ್ಲಿದ್ದ ಮೂವರು ತೀವ್ರ ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ.
ಗಾಯಾಳುಗಳಾದ ಪಿಕಪ್ ಚಾಲಕ ಬಂಟ್ವಾಳ ಕೆಳಗಿನಪೇಟೆಯ ಅಬ್ದುಲ್ ರಹಿಮಾನ್, ಪಿಕಪ್ನಲ್ಲಿದ್ದ ಬಿ.ಸಿ.ರೋಡ್ ಶಾಂತಿಅಂಗಡಿಯ ನೌಶಿನ್, ಕಲ್ಲಡ್ಕದ ಶರೀಫ್ ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

2910pkt G1ಸಿದ್ಧಕಟ್ಟೆ ಸಮೀಪದ ಮಾಡಮೆ ತಿರುವಿನಲ್ಲಿ ಬಂಟ್ವಾಳದಿಂದ ಮೂಡಬಿದಿರೆಗೆ ಸಾಗುತ್ತಿದ್ದ ತಮಿಳುನಾಡು ನೋಂದಣಿ ಹೊಂದಿದ ಲಾರಿಯ ಹಿಂಬದಿ ಚಕ್ರಕ್ಕೆ ಮೊಟ್ಟೆ ಲೈನ್ಸೇಲ್ನ ಪಿಕಪ್ ವಾಹನ ಢಿಕ್ಕಿಯಾಗಿತ್ತು .ಅಪಘಾತಕ್ಕೆ ಪಿಕಪ್ನ ಮುಂಭಾಗ ನಜ್ಜುಗುಜ್ಜಾಗಿದೆ. ಪಿಕಪ್ನಲ್ಲಿದ್ದ ಮೊಟ್ಟೆಗಳು ಒಡೆದುಹೋಗಿವೆ. ಪುಂಜಾಲಕಟ್ಟೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *