ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಮಿನಿವಿಧಾನಸೌಧ ಬಳಿ ಮಂಗಳವಾರ ನಡೆದ ಭಾರತ ಕಮ್ಯೂನಿಷ್ಟ್ ಪಕ್ಷ (ಮಾರ್ಕ್ಸ್ವಾದಿ) ಇದರ ೨೩ನೇ ತಾಲ್ಲೂಕು ಸಮ್ಮೇಳನದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿದರು. 
ದೇಶ ಮತ್ತು ರಾಜ್ಯದಲ್ಲಿ ಕಾರ್ಮಿಕ ವಿರೋಧಿ ಸರ್ಕಾರವು ಆಡಳಿತ ನಡೆಸುತ್ತಿದ್ದು, ಕಾರ್ಮಿಕರ ಹಕ್ಕು ಕಸಿದು ಬಂಡವಾಳಶಾಹಿಗಳ ಪರವಾಗಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿಗೊಳಿಸುತ್ತಿದ್ದಾರೆ ಎಂದು ಸಿಪಿಎಂ ಜಿಲ್ಲಾಧ್ಯಕ್ಷ ವಸಂತ ಆಚಾರಿ ಹೇಳಿದ್ದಾರೆ.
ಬಿ.ಸಿ.ರೋಡು ಮಿನಿವಿಧಾನಸೌಧ ಬಳಿ ಮಂಗಳವಾರ ನಡೆದ ಭಾರತ ಕಮ್ಯೂನಿಷ್ಟ್ ಪಕ್ಷ (ಮಾರ್ಕ್ಸ್ವಾದಿ) ಇದರ ೨೩ನೇ ತಾಲ್ಲೂಕು ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಗೇಣೆದಾರರ ಪರವಾಗಿ ಪ್ರಬಲ ಹೋರಾಟ ಆರಂಭಿಸಿದ್ದ ಬಂಟ್ವಾಳದಲ್ಲಿ ಇಂದು ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರುದ್ಧ ಹೋರಾಟ ನಡೆಯುತ್ತಿದೆ ಎಂದರು. ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯ ಜೆ.ಬಾಲಕೃಷ್ಣ ಶೆಟ್ಟಿ, ತಾಲ್ಲೂಕು ಸಮಿತಿ ಸದಸ್ಯ ಉದಯ ಕುಮಾರ್, ಹಿರಿಯ ಸದಸ್ಯರಾದ ಶಿವರಾಯ ಪ್ರಭು, ಸ್ವಾಗತ ಸಮಿತಿ ಗೌರವಾಧ್ಯಕ್ಷ ರಾಜಾ ಚೆಂಡ್ತಿಮಾರ್, ಮುಖಂಡರಾದ ಬಿ.ವಾಸು ಗಟ್ಟಿ, ಸಂಜೀವ ಬಂಗೇರ, ಸುರೇಂದ್ರ ಕೋಟ್ಯಾನ್, ರಾಮಣ್ಣ ವಿಟ್ಲ, ದಿನೇಶ್ ಆಚಾರಿ ಮಾಣಿ, ತುಳಸೀದಾಸ್ ವಿಟ್ಲ, ಅಪ್ಪು ನಾಯ್ಕ ನೀರಪಾದೆ, ದೇವಪ್ಪ ಗೌಡ ಕನ್ಯಾನ, ಲೋಲಾಕ್ಷಿ ಬಂಟ್ವಾಳ ಇದ್ದರು.