ಬೆಳಗಾವಿ: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು ನನಗೂ ಯಾವುದೇ ಸಂಬಂಧವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮಾತನಾಡುವ ವೇಳೆ ಸಿ,ಟಿ.ರವಿ ಅವರನ್ನು ಪಟಾಕಿ ರವಿ ಎಂದು ಹೇಳಿ ವ್ಯಂಗ್ಯ ಮಾಡಿದರು. ಸಿಟಿ ರವಿಗೂ ನನಗೂ ಸಂಬಂಧವಿಲ್ಲ. ಆದರೂ ನನ್ನ ಬಗ್ಗೆ ಮಾತನಾಡುತ್ತಾರೆ. ಸಿ.ಟಿ. ರವಿ ಅಲ್ಲ ಪಟಾಕಿ ರವಿ. ಪಟಾಕಿ ಹೊಡೆಯೊದು, ಬಿಟ್ಟುಬಿಡುವುದು ಒಳ್ಳೆಯದು ಎಂದು ಕುಟುಕಿದರು. ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಕಾಂಗ್ರೆಸ್ ಡಬಲ್ ಸ್ಟ್ಯಾಂಡ್ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಕುಮಾರಸ್ವಾಮಿ ಯವರು ಬಹಳ ಬುದ್ದಿವಂತರು, ಪ್ರಜ್ಞಾವಂತರು ಇದ್ದಾರೆ. ಅವರ ಬಗ್ಗೆ ನಮಗೆ ಮಾತಾಡಲು ಶಕ್ತಿ ಇಲ್ಲ. ಅವರು ಬಹಳ ದೊಡ್ಡವರು, ಯಾರೋ ಸಣ್ಣ ಪುಟ್ಟದವರು ಆದರೆ ಮಾತಾಡಬಹುದು. ದೊಡ್ಡವರ ಸುದ್ದಿ ಯಾಕೆ ಬೇಕು ನಮಗೆ. ಅವರ ಬಳಿ ಕೆಲಸ ಮಾಡಿದ್ದೀನಿ ಅಂತಾ ಅವರಿಗೆ ಬೈಯ್ಯೋಕೆ ಆಗುತ್ತಾ ಎಂದ ನಯವಾದ ಮಾತುಗಳಿಂದಲೇ ವಾಗ್ದಾಳಿ ನಡೆಸಿದರು.