ಎಕ್ಕಾರು: ಬಡಗ ಎಕ್ಕಾರು ಗ್ರಾಮದ ಬಡಕರೆಯಲ್ಲಿ ಶ್ರೀಮತಿ ಗೀತಾ ತಾರನಾಥ್ ಅವರಿಗೆ ವಿಜಯ ಯುವ ಸಂಗಮ ಸಂಸ್ಥೆಯ ರಜತ ವರ್ಷದ ಸವಿನೆನಪಿನಲ್ಲಿ 2ನೇ ಮನೆ ಕೊಡುಗೆ ನೀಡಲಾಯಿತು. ಈ ನೂತನ ಮನೆ “ಸಂಗಮ” ಇದರ ಗೃಹಪ್ರವೇಶ ಸಮಾರಂಭ ಡಿ.25ರಂದು ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ , ಶಾಸಕ ಉಮಾನಾಥ ಕೋಟ್ಯಾನ್ ,ಶ್ರೀ ಕುಂಭಕಂಠಿಣಿ ದೈವಸ್ಥಾನ ಎಕ್ಕಾರು ಇದರ ಆಡಳಿತ ಮೊಕೇಸರ ನಿತಿನ್ ಹೆಗ್ಡೆ, ಕಾವರಮನೆ ಎಕ್ಕಾರು, ಬಿ.ಜೆ.ಪಿ ಅಧ್ಯಕ್ಷ ಶ್ರೀ ಸುದರ್ಶನ್ ಎಂ, ನಿಕಟಪೂರ್ವ ಉಪಾಧ್ಯಕ್ಷರು ಶ್ರೀಮತಿ ಕಸ್ತೂರಿ ಪಂಜ, ಬಿ.ಜೆ.ಪಿ ಉಪಾಧ್ಯಕ್ಷರು ಈಶ್ವರ್ ಕಟೀಲು, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀ ಸುನಿಲ್ ಆಳ್ವ ಮೂಡಬಿದಿರೆ, ಭಾಸ್ಕರ ಶೆಟ್ಟಿ ನಡ್ಯೋಡಿ ಗುತ್ತು ಎಕ್ಕಾರು, ದಯಾಶಂಕರ್ ಪಿ. ಶೆಟ್ಟಿ ನಡ್ಯೋಡಿ ಗುತ್ತು ಎಕ್ಕಾರು, ವೇಣುಗೋಪಾಲ್ ಶೆಟ್ಟಿ, ಕರಂಬಾರು, ಮಂಜುನಾಥ ನಾಯಕ್, ದಯಾನಂದ ರೈ, ರತ್ನಾಕರ ಶೆಟ್ಟಿ, ಚಂದ್ರಹಾಸ್ ಶೆಟ್ಟಿ, ಜಯ ಶೆಟ್ಟಿ ದೊಡ್ಡಮನೆ ಎಕ್ಕಾರು, ಆನಂದ್ ಡಿ. ಶೆಟ್ಟಿ, ಅಜಿಲರಮನೆ ಎಕ್ಕಾರು, ಬಾಲಕೃಷ್ಣ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
