ಮೂಡುಬಿದರೆ: ಸುವರ್ಣ ಮಹೋತ್ಸವ ಕಟ್ಟಡ ಕಾಮಗಾರಿಗೆ ರಾಜ್ಯ ಸಭಾ ಸದಸ್ಯರ ನಿಧಿಯಿಂದ ಅವರು 25ಲಕ್ಷ ರೂ ನೆರವನ್ನು ನೀಡುವುದಾಗಿ ರಾಜ್ಯ ಸಭಾ ಸದಸ್ಯ, ಕೇಂದ್ರ ಮಾಜಿ ಸಚಿವ ಆಸ್ಕರ್ ಫೆನರ್ಾಂಡೀಸ್ ಘೋಷಿಸಿದರು.
ಮಹಾವೀರ ಕಾಲೇಜಿನ ಸುವರ್ಣ ಮಹೋತ್ಸವ ಸಂಸ್ಮರಣ ಕಟ್ಟಡದ ಮೊದಲ ಬ್ಲಾಕ್ ಉದ್ಘಾಟನೆ ಮತ್ತು ಎರಡನೇ ಬ್ಲಾಕ್ಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಅಮೆರಿಕಾ, ಜಪಾನ್ನಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಇಂದು ಭಾರತದ ಯುವ ಶಕ್ತಿಯ ಬಗ್ಗೆ ತಮ್ಮಲ್ಲಿ ವಿಮಶರ್ೆ ಮಾಡಿಕೊಳ್ಳುತ್ತಿವೆ. ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಭಾರತ ಜಾಗತಿಕವಾಗಿ ಮೂಲನೆಲೆಯಾಗುತ್ತಿದ್ದು ಶಿಕ್ಷಣದಿಂದ ರಾಷ್ಟ್ರದ ಸಬಲೀಕರಣ ಸಾಧ್ಯವಾಗುತ್ತದೆ. ವೇದ ಗಣಿತ ಮತ್ತು ಜ್ಯೋತಿಷ್ಯ ಶಾಸ್ತ್ರದ ಮೂಲಕ ಜಾಗತಿಕ ಮನ್ನಣೆ ಪಡೆದಿರುವ ನಮ್ಮ ರಾಷ್ಟ್ರದ ಸಾಮಥ್ರ್ಯವನ್ನು ಯುವಜನತೆ ಅರಿತುಕೊಳ್ಳಬೇಕು ಎಂದರು.
ಕಾಲೇಜಿನ ಹಳೆ ವಿದ್ಯಾಥರ್ಿ, ಉದ್ಯಮಿ ಆನಂದ ಶೆಟ್ಟಿ ಸಂಸ್ಮರಣ ಕಟ್ಟಡದ ಎರಡನೇ ಬ್ಲಾಕ್ಗೆ ಶಿಲಾನ್ಯಾಸ ನೆರವೇರಿಸಿ 5 ಲಕ್ಷ ರೂ ಕೊಡುಗೆಯನ್ನು ಪ್ರಕಟಿಸಿದರು.
ಮಹಾವೀರ ಕಾಲೇಜಿನ ಸುವರ್ಣ ಮಹೋತ್ಸವ ಕಟ್ಟಡ ಉದ್ಘಾಟನೆ.
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಣಿಪಾಲ ಅಕಾಡೆಮಿಯ ಡಾ.ಹೆಚ್.ಶಾಂತಾರಾಮ್ ಅವರನ್ನು ಸನ್ಮಾನಿಸಲಾಯಿತು. ಸುವರ್ಣ ಮಹೋತ್ಸವ ಕಟ್ಟಡ ಕಾಮಗಾರಿಗಳಿಗೆ ರೂ 5 ಲಕ್ಷ ನೆರವನ್ನು ಪ್ರಕಟಿಸಿದ ತಾಕೋಡೆಯ ಮೆಂಡಿಸ್ ಕುಟುಂಬದವರನ್ನು ಗೌರವಿಸಲಾಯಿತು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಅಭಯಚಂದ್ರ ಜೈನ್ ಅಧ್ಯಕ್ಷತೆವಹಿಸಿದ್ದರು. ಹಳೆ ವಿದ್ಯಾಥರ್ಿ ಬೆಳ್ಳಿಪಾಡಿ ಹರಿಪ್ರಸಾದ್ ರೈ, ಬ್ಲೋಸಮ್ ಫೆನರ್ಾಂಡೀಸ್, ಕಾಲೇಜಿನ ಆಡಳಿತ ಮಂಡಳಿ ಕೋಶಾಧಿಕಾರಿ ಪಿ.ಸದಾನಂದ ಭಟ್ ಉಪಸ್ಥಿತರಿದ್ದರು. ಆಡಳಿತ ಮಂಡಳಿ ಉಪಾಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ ಸ್ವಾಗತಿಸಿ ಪ್ರಾಂಶುಪಾಲ ಪ್ರೊ.ಚಂದ್ರಶೇಖರ್ ದೀಕ್ಷಿತ್ ವಂದಿಸಿದರು. ಗ್ರಂಥಪಾಲಕಿ ನಳಿನಿ ಕಾರ್ಯಕ್ರಮ ನಿರ್ವಹಿಸಿದರು.

