ಬಂಟ್ವಾಳ: ತಾಲ್ಲೂಕಿನಾದ್ಯಂತ ಬುಧವಾರ ಸಂಜೆ ಸಿಡಿಲು ಮತ್ತು ಮಿಂಚು ಸಹಿತ ಕೆಲ ಹೊತ್ತು ದಿಢೀರ್ ಮಳೆಯಾಗಿದ್ದು, ಕೆಲವೆಡೆ ಮನೆಗೆ ಹಾನಿ ಉಂಟಾಗಿದೆ. ಇಲ್ಲಿನ ಮಾಣಿ ಗ್ರಾಮದ ಶಂಭುಗ ನಿವಾಸಿ ಶೀನ ಮೂಲ್ಯ ಎಂಬವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಪರಿಕರ ಸುಟ್ಟು ಹೋಗಿದೆ.
ಮಂಚಿ ಗ್ರಾಮದ ಕೇಪಳಗುರಿ ನಿವಾಸಿ ಜಯಶ್ರೀ ಮಂಜುನಾಥ ಆಚಾರ್ಯ ಎಂಬವರ ಮನೆ ಗೋಡೆ ಮತ್ತು ಹೆಂಚು ಹಾನಿಗೀಡಾಗಿದೆ. ಕುಕ್ಕಾಜೆ ನಿವಾಸಿ ಆಯಿಷ ಎಂಬವರ ಮನೆಗೆ ಗೋಡೆ ಮತ್ತು ವಿದ್ಯುತ್ ಸಂಪರ್ಕ ಹಾನಿಗೀಡಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.