ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಭಜರಂಗದಳ ವೀರ ಮಾರುತಿ ಶಾಖೆ ಶ್ರೀರಾಮ ನಗರ ಬೆಂಜನಪದವು ಇದರ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ಪ್ರಯುಕ್ತ “ಹಿಂದೂ ಸಾಮ್ರಾಜ್ಯ ದಿನ” ಆಚರಣೆಯು ಜೂನ್ 12ರಂದು ಆದಿತ್ಯವಾರ ಸಂಜೆ 5ಕ್ಕೆಬೆಂಜನಪದವಿನ ಶ್ರೀರಾಮ ನಗರದಲ್ಲಿ ನಡೆಯಿತು.WhatsApp Image 2022-06-13 at 10.11.25 PM

ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದರು ಹಾಗೂ ಶ್ರೀಮತಿ ಜಯರಾಮ ಶೆಟ್ಟಿ ಸ್ಮರಣಾರ್ಥ ನಿರ್ಮಿಸಿದ ಜೈ ಶಿವಾಜಿ ಪ್ರಯಾಣಿಕರ ತಂಗುದಾಣ ಉದ್ಘಾಟನೆ ಗೊಳ್ಳಲಿಳಿಸಿದರು.WhatsApp Image 2022-06-13 at 10.11.24 PM

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್, ವಿ ಹಿಂ ಪ ಬಂಟ್ವಾಳ ಅಧ್ಯಕ್ಷರಾದ ಪ್ರಸಾದ್ ಬಿಸಿರೋಡ್ ಶುಭ ಹಾರೈಸಿದರು, ಭರತ್ ಕುಮ್ದೇಲ್, ದಾಮೋದರ ತುಂಗಾ, ಸುಪ್ರೀತ್ ಆಳ್ವ ,ವೇದಿಕೆಯಲ್ಲಿ ಉಪಸ್ಥಿತರಿದ್ದರು.WhatsApp Image 2022-06-13 at 10.11.24 PM (2)

ದಾಮೋದರ ನೆತ್ತರಕೆರೆ ಪ್ರಸ್ತಾವನೆಗೈದರು, ಶಿವಪ್ರಸಾದ್ ತುಂಬೆ ಸ್ವಾಗತಿಸಿ,ಅಕೇಶ್ ಬೆಂಜನಪದವು,ಪ್ರವೀಣ್ ಸಪಲ್ಯ ನೀತು ರಾಮನಗರ ಸಹಕರಿಸಿದರು,ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಸಹಾಯರ್ಥ ಮಾಡಿದ ಅದೃಷ್ಟ ಚೀಟಿ ಫಲಿತಾಂಶ

  • ಪ್ರಥಮ 2194
  • ದ್ವಿತೀಯ 2136
  • ತೃತೀಯ 1894WhatsApp Image 2022-06-13 at 10.11.24 PM (1)

By suddi9

Leave a Reply

Your email address will not be published. Required fields are marked *