ಸುದ್ದಿ9ಮೂಡುಬಿದರೆ: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಬಿದರೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.ವಿದ್ಯಾಗಿರಿ ಹಂಸನಗರದ ದಿ.ಗೋಪಾಲ ಪೂಜಾರಿ ಎಂಬವರ ಪುತ್ರ ರಂಜಿತ್ (27ವ) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತನ ಮನೆಯವರು ತೋಡಾರಿನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ನಡೆಯುತ್ತಿದ್ದ ದೈವದ ಕೆಲಸಕ್ಕೆ(ಧಾಮರ್ಿಕ) ಮಧ್ಯಾಹ್ಮ 3 ಗಂಟೆ ವೇಳೆಗೆ ಹೋಗಿದ್ದರು. ರಾತ್ರಿ 10.30ರ ವೇಳೆಗೆ ಹಿಂತಿರುಗಿ ಬಂದು ನೋಡಿದಾಗ ದೇವರ ಕೋಣೆಯ ಜಂತ್ತಿಗೆ ತನ್ನ ತಂಗಿಯ ಚೂಡಿದಾರದ ಶಾಲಿನಿಂದ ನೇಣು ಬಿಗಿದುಕೊಂಡು ಆತ್ಯಹತ್ಯೆ ಮಾಡಿಕೊಂಡಿದ್ದರು. ರಂಜಿತ್ಗೆ ಕಳೆದ ಒಂದು ವಾರದಿಂದ ಕೂಲಿ ಕೆಲಸ ಇಲ್ಲದ ಕಾರಣ ಮನೆಯಲ್ಲಿಯೇ ಇದ್ದುದರಿಂದ ಖಿನ್ನತೆಗೆ ಒಳಗಾಗಿದ್ದರು.
…………………….
