ಬಂಟ್ವಾಳ: ಬಂಟ್ವಾಳ ತಾಲೂಕು ಪಾಂಗಲ್ಪಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸೇವಾ ಸಮಿತಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ೨೭ನೇ ವರ್ಷದ ಮೊಸರು ಕುಡಿಕೆ ಉತ್ಸವ ಹಾಗೂ ವಿವಿಧ ಆಟೋಟ ಸರ್ಧೆಗಳು ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಆ.೧೮ರಂದು ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆ ಅಜ್ಜಿಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಬಂಗೇರ ಕಲ್ಲುಕೊಡಂಗೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇರ್ವತ್ತೂರು ಗ್ರಾ.ಪಂ. ಅಧ್ಯಕ್ಷ ಎಂ.ಪಿ.ಶೇಖರ್, ನಿವೃತ್ತ ಗ್ರಾಮ ಕರಣಿಕ ಅಣ್ಣು ಪೂಜಾರಿ, ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ನಿರ್ದೇಶಕ ಬೂಬ ಸಫಲ್ಯ, ಪಿಲಾತಬೆಟ್ಟು ಹಾ.ಉ.ಸ.ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಕುಂಟಜಾಲು ಮತ್ತಿತರರಿದ್ದರು.  
ಸಂಜೆ ಸಮಾರೋಪದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ಅಧ್ಯಕ್ಷತೆ ವಹಿಸಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧೀಕಾರಿ ಮಂಜಪ್ಪ ಮೂಲ್ಯ, ನಿವೃತ್ತ ಶಿಕ್ಷಕಿ ವಸಂತಿ , ಗಾಯಕ ಯಶು ಸ್ನೇಹಗಿರಿ ಅವರನ್ನು  ಸಮ್ಮಾನಿಸಲಾಯಿತು.

ಬಂಟ್ವಾಳ ತಾ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ ಪುಂಜಾಲಕಟ್ಟೆ, ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಸಿರಿಗುಂಡದಪಾಡಿ ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಮೋಹನ್ ಶೆಟ್ಟಿ ನರ್ವಲ್ದಡ್ಡ, ಗುತ್ತಿಗೆದಾರ ದಿನೇಶ್ ಶೆಟ್ಟಿ ಹರ್ಕಾಡಿ,ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಪ್ರಗತಿಪರ ಕೃಷಿಕಕ ಕೊರಗ ಶೆಟ್ಟಿ ನರ್ವಲ್ದಡ್ಡ, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ ವಾಮದಪದವು, ಹರೀಂದ್ರ ಪೈ, ಡೊಂಬಯ ಅರಳ, ಸಮಿತಿ ಗೌರವಾಧ್ಯಕ್ಷ ಕೆ.ಲಕ್ಷ್ಮೀ ನಾರಾಯಣ ಉಡುಪ, ಅಧ್ಯಕ್ಷ ಶುಭಕರ ಶೆಟ್ಟಿ ಮಠ, ಪದಾಽಕಾರಿಗಳಾದ ಪ್ರಶಾಂತ್ ಜೈನ್ ಸೇವಾ, ಸುದೀಂದ್ರ ಶೆಟ್ಟಿ ಎರ್ಮೆನಾಡು, ರಾಮಣ್ಣ ಪೂಜಾರಿ ಬಾಳೆಹಿತ್ತಿಲು, ರಂಜಿತ್ ಶೆಟ್ಟಿ , ಸತೀಶ್ ಕರ್ಕೇರ, ಗಂಗಯ್ಯ ಡಿ. ಎನ್. ಉಪಸ್ಥಿತರಿದ್ದರು. ನಿಶ್ಚಿತ್ ಶೆಟ್ಟಿ ಸ್ವಾಗತಿಸಿದರು. ದೀಕ್ಷಿತ್ ಚೌಟ ವಂದಿಸಿದರು.  ಗಣೇಶ್ ಸೇವಾ ಕಾರ್ಯಕ್ರಮ ನಿರೂಪಿಸಿದರು

By suddi9

Leave a Reply

Your email address will not be published. Required fields are marked *