ಬಂಟ್ವಾಳ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿ ಬೆಳೆ ಸಮೀಕ್ಷೆ ಆರಂಭಗೊoಡಿದ್ದು, ರೈತರು ಸ್ವತಃ ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ನಡೆಸಲು ಸರ್ಕಾರ ಆಪ್ ಸಿದ್ಧಗೊಳಿಸಿದೆ. ಮೊಬೈಲ್ ಆಪ್ ಮೂಲಕ ಆಯಾಯ ರೈತರ ಜಮೀನಿನ ಸರ್ವೆ ನಂಬರ್ ದಾಖಲಿಸಿದಾಗ ಒಟಿಪಿ ಬಳಸಿ ಬೆಳೆ ಸಮೀಕ್ಷೆ ನಮೂದಿಸುವಂತೆ ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.