ಬಂಟ್ವಾಳ: ತಾಲ್ಲೂಕಿನ ಲೊರೆಟ್ಟೋ ಮಾತಾ ಚರ್ಚಿನಲ್ಲಿ ಗುರುವಾರ ನಡೆದ ತೆನೆಹಬ್ಬ (ಮೋಂತಿ ಫೆಸ್ತ್ ) ಪ್ರಯುಕ್ತ ಧರ್ಮಗುರು ಫ್ರಾನ್ಸಿಸ್ ಕ್ರಾಸ್ತ ವಿಶೆಷ ಪ್ರಾರ್ಥನೆ ಸಲ್ಲಿಸಿದರು.

ಇಲ್ಲಿನ ಲೊರೆಟ್ಟೋ ಮಾತಾ ಚರ್ಚ್ ಸಹಿತ ವಿವಿಧ ಚರ್ಚಿನಲ್ಲಿ ಕನ್ಯಾ ಮಾತೆ ಹುಟ್ಟುಹಬ್ಬ ಪ್ರಯುಕ್ತ ಗುರುವಾರ ನಡೆದ ತೆನೆಹಬ್ಬ (ಮೋಂತಿ ಫೆಸ್ತ್ ) ಕಾರ್ಯಕ್ರಮದಲ್ಲಿ ಅಪಾರ ಮಂದಿ ಕ್ರೆöÊಸ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಬಲಿಪೂಜೆ, ಕನ್ಯಾ ಮಾತೆ ಪಲ್ಲಕಿ ಮೆರವಣಿಗೆ, ಹೂವು, ಕಬ್ಬು ಸಮರ್ಪಣೆ ಸಹಿತ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಭಕ್ತರಿಗೆ ಭತ್ತದ ತೆನೆ ವಿತರಿಸಲಾಯಿತು.
ಲೊರೆಟ್ಟೊ ಚರ್ಚಿನ ಪ್ರಧಾನ ಧರ್ಮಗುರು ಫ್ರಾನ್ಸಿಸ್ ಕ್ರಾಸ್ತ, ಮುಖ್ಯಶಿಕ್ಷಕ ಜೇಸನ್ ಮೋನಿಸ್, ರೋಯ್ಟನ್ ಡಿಸೋಜ ಮತ್ತಿತರರು ಇದ್ದರು.