ಬಂಟ್ವಾಳ: ತಾಲೂಕಿನ ಬಿ.ಸಿ.ರೋಡು ಗಾಣದಪಡ್ಪು ಸಭಾಂಗಣದಲ್ಲಿ ಸೆ.11ರಂದು ಭಾನುವಾರ ನಡೆದ ಬ್ರಹ್ಮಶ್ರೀ ನಾರಾಯಣಗುರು ಇವರ ೧೬೮ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ೨೫ ವರ್ಷ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಮುನ್ನಡೆಸಿದ ಕೆ.ಸೇಸಪ್ಪ ಕೋಟ್ಯಾನ್ ಇವರ ‘ಶುಭ ಯಾನ ಪುಸ್ತಕ’ ಬಿಡುಗಡೆಗೊಳಿಸಲಾಯಿತು. ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲು, ಕೆ.ಹರಿಕೃಷ್ಣ ಬಂಟ್ವಾಳ್ ಮತ್ತಿತರರು ಇದ್ದರು.

ಇಲ್ಲಿನ ಗಾಣಪಡ್ಪು ಬ್ರಹ್ಮಶ್ರೀ ನಾರಾಯಣಗುರು ಮಂದಿರ ಬಳಿ ತಡೆಗೋಡೆ ಮತ್ತು ಕನ್ಯಾಡಿ ಕ್ಷೇತ್ರದಲ್ಲಿ ಸ್ವಾಮೀಜಿ ಚಾತುರ್ಮಾಸ ಕೈಗೊಳ್ಳುವ ಸ್ಥಳದಲ್ಲಿ ಮೇಲ್ಛಾವಣಿ ನಿರ್ಮಾಣಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಸುಮಾರು ೫೦ಲಕ್ಷಕ್ಕೂ ಮಿಕ್ಕಿ ಮೊತ್ತದ ನೆರವು ಒದಗಿಸಿದ್ದಾರೆ ಎಂದು ಕಿಯೋನಿಕ್ಸ್ ಮತ್ತು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.

ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸಂಘದ ಅಧ್ಯಕ್ಷರಾಗಿ ೨೫ ವರ್ಷ ಪೂರೈಸಿದ ಕೆ.ಸೇಸಪ್ಪ ಕೋಟ್ಯಾನ್ ದಂಪತಿಗೆ ಸನ್ಮಾನ, ‘೨೫ರ ಶುಭ ಯಾನ’ ಪುಸ್ತಕ ಬಿಡುಗಡೆ, ಸಾಧಕರಾದ ಎಂ.ತುಂಗಪ್ಪ ಬಂಗೇರ, ವಕೀಲೆ ಶೈಲಜಾ ರಾಜೇಶ್, ಬಿ.ವಿಶ್ವನಾಥ ಪೂಜಾರಿ ಇವರಿಗೆ ಸನ್ಮಾನ, ವಿದೂಷಿ ಡಾ.ದಾಕ್ಷಾಯಿಣಿ ಕಂದೂರು, ಸ್ವಾತಿ ಕುದ್ಕೋಳಿ ಇವರನ್ನು ಅಭಿನಂದಿಸಲಾಯಿತು.

ಸಂಘದ ಉಪಾಧ್ಯಕ್ಷ ಎನ್.ಮಹಾಬಲ ಬಂಗೇರ, ಪ್ರಧಾನ ಕಾರ್ಯದರ್ಶಿ ರಮೇಶ್ ಎಂ. ತುಂಬೆ, ಜತೆ ಕಾರ್ಯದರ್ಶಿ ಆನಂದ ಸಾಲಿಯಾನ್ ಶಂಭೂರು, ಕೋಶಾಧಿಕಾರಿ ಉಮೇಶ್ ಸುವರ್ಣ, ಲೆಕ್ಕಪರಿಶೋಧಕ, ವಕೀಲ ಸತೀಶ್ ಬಿ., ಮಹಿಳಾ ಸಮಿತಿ ಅಧ್ಯಕ್ಷೆ ರೇವತಿ ಬಡಗಬೆಳ್ಳೂರು ಮತ್ತಿತರರು ಇದ್ದರು.

ಮಾಜಿ ಸಚಿವ ಬಿ.ರಮಾನಾಥ ರೈ, ಬೇಬಿ ಕುಂದರ್, ರಾಜೇಶ, ಭುವನೇಶ್ ಪಚ್ಚಿನಡ್ಕ ಮತ್ತಿತರರು ಗುರುಪೂಜೆಯಲ್ಲಿ ಪಾಲ್ಗೊಂಡರು. ದಿನೇಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *