ಬಂಟ್ವಾಳ: ಸುಮಾರು 9 ವರ್ಷಗಳ ಹಿಂದೆ ಕೃಷಿಯ ಉಳಿವಿಗಾಗಿ ಹೋರಾಟ ನಡೆಸಿದ ಕೃಷಿಕರ ವಿರುದ್ದದ ಪ್ರಕರಣ ಇನ್ನು ಕೂಡಾ ಇತ್ಯರ್ಥಗೊಂಡಿಲ್ಲ , ಕೋಟರ್ು ಕಚೇರಿ ಅಲೆದಾಟ ನಿಂತಿಲ್ಲ, ಸರಕಾರವೂ ಕೃಷಿಕರ ಪರ ಕಿಂಚಿತ್ತೂ ಕನಿಕರ ತೊರಿಸುತ್ತಿಲ್ಲ , ಎನ್ನುವ ಬೇಸರ ವ್ಯಕ್ತಪಡಿಸತ್ತಾರೆ ನೇತ್ರಾವತಿ ನದಿ ನಿರು ಬಳಕೆದಾರರ ಹೋರಾಟ ಸಮಿತಿಯವರು.
ಘಟನೆಯ ವಿವಿರ: ನೇತ್ರಾವತಿ ನದಿಯಿಂದ ಕೃಷಿಕರು ನದಿಯ ನೀರನ್ನು ಕೃಷಿಗಾಗಿ ಉಪಯೋಗಿಸಬಾರದು ಎನ್ನುವ ತಾಕೀತು ಮತ್ತು ಮೆಸ್ಕಾಂ ಇಲಾಖೆ ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದ್ ಸಂದರ್ಭ 2005ರಲ್ಲಿ ನೇತ್ರಾವದಿ ನದಿ ನೀರು ಬಳಕೆದಾರ ವೇದಿಕೆಯ ವತಿಯಿಂದ ಹೋರಾಟಗಾರ ಕೃಷಿಕ ಸುಬ್ಬಣ್ಣ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ರೈತರಿಗಾಗುವ ಸಮಸ್ಯೆಯ ಬಗ್ಗೆ ಹೋಟೆಲ್ ರಂಗೋಲಿಯಲ್ಲಿ ರೈತರು ಒಟ್ಟಾಗಿ ಪ್ರತಿಭಟನಾ ಸಭೆ ನಡೆಸಿ ಬಳಿಕ ಪಾದಯಾತ್ರೆಯ ಮೂಲಕ ಬಿ.ಸಿರೋಡಿನ ಮೆಸ್ಕಾಂ ಕಚೇರಿಗೆ ಮನವಿ ನೀಡಲು ಆಗಮಿಸಿದ್ದರು.
ಅದಾಗಲೇ ಮೆಸ್ಕಾಂ ಇಲಾಖೆಯವರು ಕಚೇರಿಯ ಭದ್ರತೆಯ ಹಿನ್ನಲೆಯಲ್ಲಿ ಸಾಕಷ್ಟು ಪೋಲಿಸ್ ಬಂದೋಬಸ್ತು ಮಾಡಿದ್ದರು. ಇಲಾಖೆಯ ಗೇಟನ್ನು ಕೂಡಾ ಹಾಕಲಾಗಿತ್ತು ಕೃಷಿಕರು ಒಳಹೋಗದಂತೆ ಪೋಲಿಸರು ತಡೆಯನ್ನು ಮಾಡಿದ್ದರು. ಮೊದಲೇ ಇಲಾಖೆಯ ಮೇಲಿದ್ದ ಕೃಷಿಕರ ಕೋಪ ಇಮ್ಮಡಿಯಾಯಿತು. ಇಲಾಕೆಯ ಗೇಟು ಮುರಿದು ಒಳನುಗ್ಗಲು ರೈತರು ನೋಡಿದಾಗ ಪೋಲಿಸರ ಮತ್ತು ಕೃಷಿಕರ ನಡುವೆ ನೂಕು ನುಗ್ಗಲು ನಡೆಯಿತು, ಅದು ಅತಿಯಾಗಿ ಪರಿಸಿತಿ ವಿಕೋಪಕ್ಕೆ ತಿರುಗುತ್ತದೆ ಎಂದು ಅರಿತು ಅಂದಿನ ಸರ್ಕಲ್ ಇನ್ಸೆಪೆಕ್ಟರ್ ಸಂಜೀವ ನ್ಯಾಕ್ ಕೃಷಿಕರ ಮೇಲೆ ಲಾಟಿ ಜಾರ್ಜ ಮಾಡಿದರು. ಹಲವಾರು ಕೃಷಿಕರು ಗಾಯಗೊಂಡು ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದರು.
ಇದೇ ಸಂದರ್ಭ ಇಲ್ಲಿ ಸಂಸದರಾಗಿದ್ದ ಡಿ.ವಿ.ಸದಾನಂದ ಗೌಡ ಸ್ಥಳಾಕ್ಕಾಗಮಿಸಿ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಇಲಾಖೆ ಮತ್ತು ಕೃಷಿಕರ ನಡುವೆ ಉಂಟಾದ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಮಾತುಕತೆಯನ್ನು ನಡೆಸಿದ್ದರು. ಆದರೆ ಮರುದಿನ ಅಲ್ಲಿ ಉಂಟಾದ ಗಲಾಟೆಯ ಸಂದರ್ಭ ಸ್ಥಳದಲ್ಲಿದ್ದ ಹೋರಾಟ ಸಮಿತಿಯ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಸರಪಾಡಿ ಆಶೋಕ್ ಶೆಟ್ಟಿ, ಬಾಬು ಮಾಸ್ಟರ್, ಪೊಳಲಿ ಜಯರಾಮ್, ಅನಂತ ಕೃಷ್ಣ ಭಟ್ಟ್, ಪುರುಷೋತ್ತಮ ಪೂಜಾರಿ, ಮಾರ್ಷಲ್, ಕರುಣಾಕರ ಆಳ್ವ, ಶಶಿದರ ಪೂಜಾರಿ, ವಿಶ್ವನಾಥ ಶೆಟ್ಟಿ, ವೆಂಕಟೇಶ್ವರ ಭಟ್ಟ್,ಗೋಪಾಲಕೃಷ್ಣ ಪ್ರಭು, ಶೀನ ಬಲ್ಲಾಳ್, ವಸಂತ ಪ್ರಭು, ಬಿ.ಟಿನಾರಾಯಣ ಭಟ್ಟ್, ದಾಮೋದರ ಗೌಡ, ರಾಮಣ್ಣ ಬಂಗೇರ, ಆಶೋಕ್ ಕುಮಾರ್ ಬರಿಮಾರು,ರಾಜೇಶ್ ರೈ, ಬಾಬು ಮಾಸ್ಟರ್, ಶಶೀಂದ್ರ ಆಚಾರ್ಯ ಸೇರಿದಂತೆ ಸುಮಾರು 21 ಜನ ಕೃಷಿಕರ ವಿರುದ್ದ ಪೋಲಿಸ್ ಇಲಾಖೆ ಪ್ರಕರಣ ದಾಖಲು ಮಾಡಿದ್ದರು.
ನಂತರ ಜಾಮೀನಿನ ಮೇಲೆ ಬಿಡುಗಡೆ ಕೂಡಾ ನಡೆಯಿತು. ಬಳಿಕ ರಾಜಿಯಲ್ಲಿ ಮುಗಿಯುತ್ತದೆ ಎಂದು ಹೇಳಿ ಇನ್ನೇನು ಹಲವು ಸಬೂಬನ್ನು ಹೇಳಿಕೊಂಡು ಮುಂದೆ ಸಾಗುತ್ತಿದ್ದ ಪ್ರಕರಣಕ್ಕೆ 2013 ರಲ್ಲಿ ಸುಳ್ಯದ ಇನ್ಸ್ಪೆಕ್ಟರ್ ಸುದರ್ಶನ್ ಚಾಜರ್ು ಶೀಟ್ ಹಾಕಿದರು. ಮಾನವ ಹಕ್ಕು ಉಲ್ಲಂಘನೆ ಮಾಡಿದ್ದಾರೆ ಎನ್ನುವ ಬಗ್ಗೆ ಕೃಷಿಕರು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದರು. ಆ ನಂತರ ಇಂದಿನವರಗೆ ಕೂಡಾ ಕೃಷಿಕರು ಕೋಟರ್ು ಕಚೇರಿ ಅಲೆದಾಡುವುದು ತಪ್ಪಿಲ್ಲ, ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದ ಸಂದರ್ಭ ರಾಜ್ಯದ ಎಲ್ಲಾ ರೈತರ ಕೇಸುಗಳನ್ನು ವಾಪಾಸು ಪಡೆಯಬೇಕೆಂದು ಹೇಳಿದಾಗ, ಇಲ್ಲಿಯ ರೈತರ ಪ್ರಕರಣಗಳು ಹಿಂತೆಗೆದು ಕೊಳ್ಳುತ್ತಾರೆ ಎಂದು ನಂಬಿದ್ದರು. ಅ ಸಂದರ್ಭದಲ್ಲಿ ಇಲ್ಲಿನ ಕೃಷಿಕರ ಕೇಸು ಮಾತ್ರ ಬಿಟ್ಟುಹೋಗಿಲ್ಲ.
ಮುಂದೆ ದ.ಕ.ಜಿಲ್ಲೆಯ ಕೃಷಿಕರ ಪರ ಹೋರಾಟಗಾರ ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಈ ಪ್ರಕರಣಕ್ಕೆ ಹೆಚ್ಚು ಒತ್ತಡವನ್ನು ತರಲಾಯಿತು. ಆದರೆ ಕೃಷಿಕರು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದರಿಂದ ಅದನ್ನು ಏಕಾಏಕಿ ಕೇಸನ್ನು ಹಿಂದೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಚೀಫ್ ಸೆಕ್ರೇಟರಿ ಹೇಳಿದರು ಎಂದು ಸರಪಾಡಿ ಆಶೋಕ್ ಶೆಟ್ಟಿ ಪತ್ರಿಕೆಗೆ ತಿಳಿಸಿದ್ದಾರೆ.
ಪ್ರಸ್ತುತ ಮಾಜಿ ಮುಖ್ಯಮಂತ್ರಿ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಕೃಷಿಕರ ಪರ ನಿಂತು ಪ್ರಕರಣಕ್ಕೆ ಅಂತ್ಯ ಹಾಡಲು ಸಹಕರಿಸುತ್ತಾರಾ ಎನ್ನುವುದನ್ನು ಕಾದುನೋಡಬೇಕಾಗಿದೆ.ಅಂತೂ ಕೃಷಿಯ ಬಗ್ಗೆ ಸಾಕಷ್ಟು ವೇದಿಕೆ ಹಂಚಿಕೊಳ್ಳುವ ಜನಪ್ರತಿನಿಧಿಗಳು ರೈತರ ಹೋರಾಟಕ್ಕೆ ಸಹಕಾರ ನೀಡಿಲ್ಲ ಮತ್ತು ನಂತರ ಬೆಳವಣಿಗೆಯಲ್ಲಿ ಪ್ರಕರಣಕ್ಕೆ ಸುಖಾಂತ್ಯ ಕಾಣುವುದಕ್ಕೆ ಯಾವುದೇ ರೀತಿಯ ಒತ್ತಡ ಹಾಕಿಲ್ಲ ಎನ್ನುವುದು ಕೂಡಾ ಇವರ ಆರೋಪವಾಗಿದೆ.