ಬಂಟ್ವಾಳ: ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ವಿಟ್ಲದಲ್ಲಿ ನಡೆಯಲಿರುವ ರಾಜ್ಯಮಟ್ಟದ ಯುವಜನ ಮೇಳ ಹಾಗೂ ಯುವ ಸಬಲೀಕರಣದ ಪೂರ್ವಭಾವಿ ಸಭೆ ಮಂಗಳವಾರ ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ದೇರಾಜೆ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನ ಎಸ್ಜೆಎಸ್ಆರ್ವೈ ಸಭಾಮಗಣದಲ್ಲಿ ನಡೆಯಿತು.
1 (1)
ಸಭೆಯನ್ನುದ್ದೇಶಿಸಿ ತಹಶೀಲ್ದಾರ್ ಮಲ್ಲೇಸ್ವಾಮೀ ಮಾತನಾಡಿ ತಾಲೂಕಿನ ಯಾವುದೇ ಯುವಕ ಹಾಗೂ ಯುವತಿ ಮಂಡಲಗಳಿಂದ ನಿವೇಶನ ಕೋರಿ ಅರ್ಜಿ  ಬಂದಿಲ್ಲ. ಆದ್ದರಿಂದ ನಿವೇಶನ ಕಾಯ್ದಿರಿಸಲು ಸಾಧ್ಯವಾಗಿಲ್ಲ. ತಾಲೂಕಿನ ಯಾವುದೇ ಸ್ಥಳದಲ್ಲಿ ಸೂಕ್ತ ನಿವೇಶನ ಗುರುತಿಸಿ ಅರ್ಜಿ  ಕೊಟ್ಟರೆ ಒಂದು ವಾರದೊಳಗಾಗಿ ಆ ಕೆಲಸ ಮಾಡಿಕೊಡುತ್ತೇನೆ ಎಂದು ಭರವಸೆಯಿತ್ತರು. ಸಕಾರಿ ಅಥವಾ ಸಾರ್ವಜನಿಕ ಕೆಲಸಗಳನ್ನು ನಡೆಸಲು ಸಭಾ ಭವನದ ಕೊರತೆ ಇದ್ದು ಸುಸಜ್ಜಿತ ಸಭಾಭವನದ ನಿರ್ಮಾಣವೂ ಆಗಬೇಕಾಗಿದೆ ಎಂದರು.

ತಾಲೂಕು ಪಂಚಾಯತ್ ಅಧದ್ಯಕ್ಷ ಯಶವಂತ ದೇರಾಜೆ ಮಾತನಾಡಿ ರಾಜ್ಯಮಟ್ಟದ ಯುವಜನ ಮೇಳದಲ್ಲಿ ತಾಲೂಕಿನ ಎಲ್ಲಾ ಗ್ರಾಮದ ಯುವ, ಯುವತಿ ಮಂಡಲಗಳು ಭಾಗವಹಿಸ ಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಗ್ರಾಮಪಂಚಾಯತ್ಗಳ ಪಿಡಿಓಗಳು ವಿಶೇಷವಾಗಿ ಮುತುವರ್ಜಿ  ವಹಿಸ ಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ಸದಸ್ಯ ದಿನೆಶ್ ಅಮ್ಟೂರು, ಕಾರ್ಯನಿರ್ವ ಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ, ದ.ಕ.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ರಾಜೀವ ಸಾಲ್ಯಾನ್, ತಾಲೂಕು ಯುವಜನ ಒಕ್ಕೂಟದ ಉಪಾಧ್ಯಕ್ಷ ತಿಮ್ಮಪ್ಪ ಪೂಜಾರಿ, ಪ್ರಧಾನ ಸಂಚಾಲಕ ಸುದರ್ಶನ ಪಡಿಯಾರ್ ವೇದಿಕೆಯಲ್ಲಿದ್ದರು. ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಭಾಶ್ಚಂದ್ರ ಶ್ಟೆಟ್ಟಿ ಸ್ವಾಗತಿಸಿ, ಯುವಜನ ಕ್ರೀಡಾಧಿಕಾರಿ ನವಿನ್ ಧನ್ಯವಾದವಿತ್ತರು. ಮಂಜುವಿಟ್ಲ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *