ಮೂಡುಬಿದರೆ: ಆಲಂಗಾರು ಲಯನ್ಸ್ ಕ್ಲಬ್ಗೆ ಜಿಲ್ಲಾ ಗವರ್ನರ್ ಹೆಚ್.ಎಸ್. ಮಂಜುನಾಥ್ ಮೂರ್ರ್ತೆ ಎಂಜೆಎಫ್ ನ.20 ಅಧಿಕೃತವಾಗಿ ಭೇಟಿ ನೀಡಲಿದ್ದಾರೆ ಎಂದು ಆಲಂಗಾರು ಲಯನ್ಸ್ ಕ್ಲಬ್ ಕಾರ್ಯದರ್ಶಿ ಸೆಲ್ವಿನ್ ಜುಡ್ ಕುಲಾಸೋ ತಿಳಿಸಿದ್ದಾರೆ.

ಮೂಡುಬಿದರೆ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆಲಂಗಾರು ಆವರಣದಲ್ಲಿ ಲಯನ್ಸ್ ಕ್ಲಬ್ ವತಿಯಿಂದ 1ಲಕ್ಷರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪಾರ್ಕ್ ಮತ್ತು ಶೌಚಾಲಯವನ್ನು ಉದ್ಘಾಟಿಸಲಿದ್ದಾರೆ. ಮತ್ತು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಹೊಸಬೆಟ್ಟುವಿನ ಸೀತಾರಾಮ ಆಚಾರ್ಯ ಅವರ ಮಗುವಿನ ಚಿಕಿತ್ಸೆಗಾಗಿ 15000 ಮತ್ತು ವಲೇರಿಯನ್ ಅವರ ಮಗುವಿನ ಚಿಕಿತ್ಸೆಗಾಗಿ 3000 ಧನ ಸಹಾಯ, ಮತ್ತು ಆಲಂಗಾರಿನ ಮೌಂಟ್ ರೋಸರಿ ಆಶ್ರಮಕ್ಕೆ 50ಕೆ.ಜಿ ಅಕ್ಕಿ, 10 ಜನ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಗಡಿಯಾರವನ್ನು ವಿತರಿಸಲಿದ್ದಾರೆ ಎಂದು ತಿಳಿಸಿದರು.
ಲಯನ್ಸ್ ಕ್ಲಬ್ನ ಸದಸ್ಯರಾದ ಜೆರಾಲ್ಡ್ ಲೋಬೋ ಮತ್ತು ಮೆಲ್ವಿನ್ ಲೋಬೋ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.