ಬಂಟ್ವಾಳ: ನರಿಕೊಂಬು ಗ್ರಾಮದ ಅಬ್ಬೆಯಮಜಲು ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾ ಕೇಂದ್ರದ ವತಿಯಿಂದ ‘ಕಲಾರಾಧನೆ ದಶಮಾನೋತ್ಸವ’ ಪ್ರಯುಕ್ತ ಚೆಂಡೆ ಮತ್ತು ಮದ್ದಳೆ ಸಹಿತ ಭಾಗವತಿಕೆ ಕಲಿಯಲು ಮುಕ್ತ ಅವಕಾಶ ನೀಡಲಾಗಿದೆ ಎಂದು ಕಲಾ ಕೇಂದ್ರದ ಅಧ್ಯಕ್ಷ ಕೃಷ್ಣರಾಜ ಭಟ್ ಹೇಳಿದ್ದಾರೆ.
ಇಲ್ಲಿನ ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾ ಕೇಂದ್ರದ ವತಿಯಿಂದ ನ.04ರಂದು ಶುಕ್ರವಾರ ಆರಂಭಗೊಂಡ ಉಚಿತ ಹಿಮ್ಮೇಳ ತರಗತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಾಣೆಮಂಗಳೂರು ಶ್ರೀ ವೀರ ವಿಠಲ ದೇವಸ್ಥಾನ ಮೊಕ್ತೇಸರ ಪ್ರಮೋದ್ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಟ್ರಸ್ಟಿ ಡಾ.ಸುಬ್ರಹ್ಮಣ್ಯ ಭಟ್, ವಾಸುದೇವ ಭಟ್, ವೆಂಕಟೇಶ ರಾವ್, ಯತೀಶ ಶೆಟ್ಟಿ ಮತ್ತಿತರರು ಇದ್ದರು.