ಬಂಟ್ವಾಳ:ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ರಾಯಿ-ಬದನಡಿ ಸಂಪರ್ಕ ರಸ್ತೆಯಲ್ಲಿ ಸಂಪೂರ್ಣ ಡಾಂಬರು ಎದ್ದು ಹೋಗಿ ಹೊಂಡಮಯ ರಸ್ತೆಯಲ್ಲಿನ ಜೆಲ್ಲಿ ಚೆಲ್ಲಾಪಿಲ್ಲಿಯಾಗಿ ಇಲ್ಲಿನ ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದ ರಸ್ತೆಗೆ ಇದೀಗ ತಾತ್ಕಾಲಿಕ ತೇಪೆ ಡಾಂಬರೀಕರಣ ಕಾಮಗಾರಿ ಆರಂಭಗೊಂಡಿದೆ.
ಸುಮಾರು 800 ವರ್ಷಗಳಿಗೂ ಮಿಕ್ಕಿ ಹಳೆಯ ಪುರಾತನ ಹಿನ್ನೆಲೆ ಹೊಂದಿರುವ ಇಲ್ಲಿನ ಕಾರಣಿಕ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಳದಲ್ಲಿ ಇದೇ ನ.26ರಿಂದ 28ರತನಕ ವಾಷರ್ಿಕ ‘ಷಷ್ಠೀ ಮಹೋತ್ಸವ’ ನಡೆಯಲಿದ್ದು, ಈ ಸಂದರ್ಭದಲ್ಲಿ ಪಂಚಮಿ ಉತ್ಸವ, ಮಡಸ್ನಾನ, ಸಾರ್ವಜನಿಕ ಅನ್ನಸಂತರ್ಪಣೆ, ದೇವರ ಬಲಿ ಉತ್ಸವ, ಪರಿವಾರ ದೈವಗಳ ನೇಮೋತ್ಸವ ಮತ್ತಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಹಸ್ರಾರು ಮಂದಿ ಭಕ್ತರು ಆಗಮಿಸುತ್ತಿದ್ದಾರೆ.

ತೇಪೆ ಡಾಂಬರೀಕರಣ ಕಾಮಗಾರಿ ಆರಂಭ
22btl-badanadi-1

22btl-badanadi road

22btl-badanadi
ಕಳೆದ ವರ್ಷವೂ ಇಲ್ಲಿನ ಹದಗೆಟ್ಟ ರಸ್ತೆಯಲ್ಲಿ ಬಾಡಿಗೆ ರಿಕ್ಷಾ ಮೂಲಕ ದೇವಳಕ್ಕೆ ಆಗಮಿಸುತ್ತಿದ್ದ ಮಹಿಳೆಯೊಬ್ಬರು ರಿಕ್ಷಾ ಉರುಳಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಪ್ರತೀ ವರ್ಷ ಇಲ್ಲಿನ ಭಜನಾ ಮಂಡಳಿ ವತಿಯಿಂದಲೇ ಸ್ಥಳೀಯರು ಸ್ವತಃ ಶ್ರಮದಾನ ಮೂಲಕ ರಸ್ತೆ ದುರಸ್ತಿಗೊಳಿಸುತ್ತಿದ್ದು, ಈ ಬಾರಿ ರಸ್ತೆಯುದ್ದಕ್ಕೂ ಜೆಲ್ಲಿ ಎದ್ದು ಹೋಗಿರುವ ಬಗ್ಗೆ ನ.2ರಂದು ‘ಪ್ರಜಾವಾಣಿ’ಯಲ್ಲಿ ಸಚಿತ್ರ ವರದಿ ಪ್ರಕಟಗೊಂಡಿತ್ತು.
ಕಳೆದ 12 ವರ್ಷಗಳ ಹಿಂದೆ ನಡೆದ ದೇವಳದ ಪುನರ್ನವೀಕರಣ ಮತ್ತು ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಅಂದಿನ ಸಚಿವರಾಗಿದ್ದ ಬಿ.ರಮಾನಾಥ ರೈ ಅವರು ತುತರ್ು ರಸ್ತೆ ವಿಸ್ತರಣೆ ಕಾಮಗಾರಿ ನಡೆಸಿದ್ದರು. ಆ ಬಳಿಕ ಇಲ್ಲಿನ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ದಿ.ಕೆ.ಸಂತೋಷ್ ಭಂಡಾರಿ ರಸ್ತೆ ಡಾಂಬರೀಕರಣಗೊಳಿಸಿದ್ದು, ಹಾಲಿ ಜಿ.ಪಂ.ಸದಸ್ಯೆ ನಳಿನಿ ಬಿ.ಶೆಟ್ಟಿ ‘ತೇಪೆ ಕಾಮಗಾರಿ’ ನಡೆಸಿದ್ದರು.
ಇದೇ ರಸ್ತೆಯಲ್ಲಿ ಸಕರ್ಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೂ ರಸ್ತೆಗೆ ಪುನರ್ ಡಾಂಬರೀಕರಣ ಮತ್ತು ದುರಸ್ತಿ ಕಾಮಗಾರಿ ನಡೆಸುತ್ತಿಲ್ಲ. ರಸ್ತೆ ಬದಿ ಚರಂಡಿ ನಿರ್ವಹಣೆ ಮತ್ತು ಹಬ್ಬಿರುವ ಪೊದೆ ಕಡಿಯುವ ಬಗ್ಗೆಯೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.ಪ್ರತಿಭಟನಾ ಶ್ರಮದಾನ:
ಇಲ್ಲಿನ ರಸ್ತೆ ಅವ್ಯವಸ್ಥೆ ಬಗ್ಗೆ ‘ಪ್ರಜಾವಾಣಿ’ ಸಹಿತ ವಿವಿಧ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆಯೇ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ನೇತೃತ್ವದಲ್ಲಿ ಸ್ಥಳೀಯ 50ಕ್ಕೂ ಮಿಕ್ಕಿ ಮಂದಿ ಸ್ಥಳೀಯ ಯುವಕರು ಇತ್ತೀಚೆಗೆ ಶ್ರಮದಾನ ನಡೆಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ್ದರು.
ರಾಜಕೀಯ:
ಸ್ಥಳೀಯ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರು ಬಿಜೆಪಿಯವರೇ ಆಗಿದ್ದರೂ ಪ್ರತಿಭಟನೆ ಯಾರ ವಿರುದ್ಧ ಎಂದು ಕಾಂಗ್ರೆಸ್ ಮುಖಂಡರು ವ್ಯಂಗ್ಯದಿಂದಲೇ ಕೆಣಕಿದ್ದರು. ಈ ನಡುವೆ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಮೀಸಲಿಟ್ಟ ಅನುದಾನಕ್ಕೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕೊಕ್ಕೆ ಹಾಕುತ್ತಿದ್ದಾರೆ ಎಂದು ಸ್ಥಳೀಯ ಜಿ.ಪಂ.ಸದಸ್ಯೆ ನಳಿನಿ ಬಿ.ಶೆಟ್ಟಿ ಆರೋಪಿಸಿದ್ದಾರೆ. ಈ ತೇಪೆ ಡಾಂಬರೀಕರಣ ಕಾಮಗಾರಿಯನ್ನು ‘ಮುಂಗಡ ಕಾಮಗಾರಿ’ಯಾಗಿ ರೂ 5ಲಕ್ಷ ವೆಚ್ಛದಲ್ಲಿ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
-ಮೋಹನ್ ಕೆ.ಶ್ರೀಯಾನ್

By suddi9

Leave a Reply

Your email address will not be published. Required fields are marked *