ಬಂಟ್ವಾಳ:ಇಲ್ಲಿನ ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಬಳಿ ಆಸ್ಪತ್ರೆ ಎದುರು ತೆರವುಗೊಂಡು ನೂತನವಾಗಿ ನಿರ್ಮಿಸಿದ ಸಾರ್ವಜನಿಕ ಬಸ್ ನಿಲ್ದಾಣವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಬುಧವರ ಲೋಕಾರ್ಪಣೆಗೊಳಿಸಿದರು. ಕಾಂಗ್ರೆಸ್ ಕಾರ್ಯಕರ್ತರ ಸಹಕಾರದಲ್ಲಿ ನಿರ್ಮಾಣಗೊಂಡ ಬಸ್ ನಿಲ್ದಾಣ ಸ್ಥಳೀಯ ನಾಗರಿಕರು ಮತ್ತು ವಾಹನ ಸವಾರರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು. ಕಳೆದ ಚುನಾವಣೆಯಲ್ಲಿ ಅಪಪ್ರಚಾರದಿಂದ ಸೋಲಿಸಿದ ಬಿಜೆಪಿಗೆ ಈ ಬಾರಿ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಕಾಂಗ್ರೆಸ್ ಸೇರ್ಪಡೆ:
ಇದೇ ವೇಳೆ ಸ್ಥಳೀಯ ಬಿಜೆಪಿ ಕಾರ್ಯಕರ್ತರಾದ ಲಕ್ಷ್ಮಣ ಪೂಜಾರಿ ನಾಕುನಾಡು, ಸುಧಾಕರ ಪೂಜಾರಿ ನಾಕುನಾಡು, ತುಳಸಿ ದುಗ್ಗಮರಗುಡ್ಡೆ ಇವರು ಕಾಂಗ್ರೆಸ್ ಸೇರ್ಪಡೆಗೊಂಡರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಕೆ.ಮಾಯಿಲಪ್ಪ ಸಾಲ್ಯಾನ್, ಸುಧಾಕರ್ ಶೆಣೈ ಖಂಡಿಗ, ಬಿ.ಪದ್ಮಶೇಖರ್ ಜೈನ್, ಪುಷ್ಪಲತಾ ಮೋಹನ್ ಸಾಲಿಯನ್, ವನಿತಾ ಆನಂದ, ಲೀಲಾವತಿ ಶೆಟ್ಟಿ ನೆಲ್ವಿಸ್ಟರ್ ಪಿಂಟೊ, ಬಾಲಾಜಿ ರಾವ್, ಬೆನ್ನಡಿಕ್ಟ್ ಡಿಸೋಜಾ, ಪಿಡಿಒ ಅರುಣ್ ಫೆನಾರ್ಂಡಿಸ್, ಪುರುಷೋತ್ತಮ ನಾಕುನಾಡು, ವಿಠಲಶೆಟ್ಟಿ, ವಸಂತ ಹೆಗಡೆ , ಮೋಹನ್ ಸಾಲಿಯಾನ್, ವಿಕ್ಟರ್ ಡಿಸೋಜಾ, ಅಂಬ್ರೋಸ್ ಮೊರಾಸ್, ಲಾರೆನ್ಸ್ ಡಿಸೋಜ, ಪ್ರಮೋದ್, ಕರುಣಾಕರ ನಾಕುನಾಡು, ನಾರಾಯಣ ಪೂಜಾರಿ ನಾಕುನಾಡು, ಅವಿಲ್ ಮೊರಸ್ ಮತ್ತಿತರರು ಇದ್ದರು.