ಬಂಟ್ವಾಳ: ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ನಾಭಿರಾಜ್ ಜೈನ್ ಅವರು ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕ್ಗೆ ಬೇಟಿ ನೀಡಿದರು. ಈ ಸಂದರ್ಭ ಅವರನ್ನು ತಾಲೂಕು ತಹಶೀಲ್ದಾರ್ ಮಲ್ಲೇಸ್ವಾಮಿ ಸಾಲು ಹೊದಿಸಿ ಗೌರವಿಸಿದರು. ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಪ್ರಮುಖರಾದ ಸದಾನಂದ ಶೆಟ್ಟಿ, ಅಬ್ಬಾಸ್ ಆಲಿ, ದಿನೇಶ್ ಶೆಟ್ಟಿ, ಪರಮೇಶ್ವರ್, ಶಿಕ್ಷಕ ರಮೇಶ್ ನಾಯಕ್ ರಾಯಿ ಮತ್ತಿತರರು ಉಪಸ್ಥಿತರಿದ್ದರು.
