ಬಂಟ್ವಾಳ : ಪ್ರತಿ ಮಕ್ಕಳು ಕೂಡ ಈ ದೇಶದ ಅತ್ಯಮೂಲ್ಯ ಸಂಪತ್ತಾಗಿದ್ದು, ಈ ನಿಟ್ಟಿನಲ್ಲಿ ಪೋಷಕರು ಮಕ್ಕಳು ಪ್ರಕಾಶಿಸುವ ರೀತಿಯಲ್ಲಿ ಮಾರ್ಗದರ್ಶನ ನೀಡಬೇಕು. ಯುವ ಜನಾಂಗ ಬಲಿಷ್ಠವಾದಾಗಲೇ ಈ ದೇಶ ಬಲಿಷ್ಠವಾಗುವುದಕ್ಕೆ ಸಾಧ್ಯ ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.


ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ (ರಿ.) ಫರಂಗಿಪೇಟೆ ಇದರ 11 ನೇ ವಾರ್ಷಿಕೋತ್ಸವದ ಪ್ರಯುಕ್ತ ಭಾನುವಾರ ಅರ್ಕುಳ ಯಶಸ್ವಿ ಹಾಲ್ ನಲ್ಲಿ ನಡೆದ ವಿಧಾನ ಸಭೆಯ ನೂತನ ಸಭಾಧ್ಯಕ್ಷರಾಗಿರುವ ಯು.ಟಿ.ಖಾದರ್ ಅವರಿಗೆ ಸನ್ಮಾನ ಕಾರ್ಯಕ್ರಮ, ಬೃಹತ್ ರಕ್ತದಾನ ಶಿಬಿರ, ಆರೋಗ್ಯ ಕಾರ್ಡ್ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಅತಿಥಿಯಾಗಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಅರೋಗ್ಯ ಕಾರ್ಡ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ರಕ್ತದಾನ ಶ್ರೇಷ್ಠವಾದ ದಾನವಾಗಿದ್ದು,ಮನುಷ್ಯನ ನಡುವೆ ಪ್ರೀತಿ ವಿಶ್ವಾಸಕ್ಕೆ ಉತ್ತಮ ಕೊಂಡಿಯಾಗಿದೆ ಎಂದು ಅವರು ತಿಳಿಸಿದರು.
ರೆಸ್ಕ್ಯೂ ಚಾರಿಟೇಬಲ್ ನ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮಾರಿಪಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

 ಕೆ.ಪಿ.ಸಿ‌.ಸಿ‌.ಪ್ರಧಾನ ಕಾರ್ಯದರ್ಶಿಗಳಾದ ಇನಾಯತ್ ಆಲಿ, ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಮಿಥುನ್‌ ರೈ, ಮಾಜಿ .ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಫಾರೂಕ್ ಪರಂಗಿಪೇಟೆ,ಕಣಚೂರು ಮೆಡಿಕಲ್ ಕಾಲೇಜಿನ ಮ್ಯಾನೇಜಿಂಗ್ ಡೈರೆಕ್ಟರ್ ಅಬ್ದುಲ್ ರಹಿಮಾನ್ ಕಣಚೂರು, ಉದ್ಯಮಿಗಳಾದ ಝಕಾರಿಯಾ ಜೊಕಟ್ಟೆ,   ಶರೀಫ್ ಬೋಳಾರ್, ಮಹಮ್ಮದ್ ಯುನೂಸ್ ಹಸನ್ , ಐ.ಅಶ್ರಫ್ ಮೈಸೂರು, ಮಹಮ್ಮದ್ ಬಶೀರ್,ಅಬ್ದುಲ್ ಸಲಾಂ, ಗಿರಿಧರ್ ಶೆಟ್ಟಿ, ಬಂಟ್ವಾಳ ಡಿ.ವೈ.ಎಸ್.ಪಿ. ಪ್ರತಾಪ್ ಸಿಂಗ್ ಥೋರಾಟ್,ಮಾಜಿ ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್, ಪುದು ಗ್ರಾ.ಪಂ‌. ಅಧ್ಯಕ್ಷೆ ರಶೀದಾ ಭಾನು, ವಾಲಿಬಾಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಶ್ರೀಕಾಂತ್ ಶೆಟ್ಟಿ,  ಉದ್ಯಮಿಗಳಾದ ಅಸೀರ್ ಮೇಲ್ಮನೆ ಫರಂಗಿಪೇಟೆ,  ಯೂಸುಫ್ ಅಲಂಕಾರು, ರಮ್ಲಾನ್ ಮಾರಿಪಳ್ಳ, ಆಸೀಫ್ ಡೀಲ್ಸ್, ಸಾಹುಲ್ ಹಮೀದ್, ತಾಹೀರ್ ಸಾಲ್ಮರ,ಮಹಮ್ಮದ್ ಹನೀಫ್ ಗೋಳ್ತಮಜಲು, ಇಸ್ಮಾಯಿಲ್ ಕೆ.ಇ.ಎಲ್, ಯು.ಪಿ ಇಬ್ರಾಹಿಂ, ಇಕ್ಬಾಲ್ ಸುಜೀರ್, ಟಿ.ಕೆ ಬಶೀರ್ ಫರಂಗಿಪೇಟೆ, ಅಸೀಪ್ ಇಕ್ಬಾಲ್, ಝಿಯಾವುದ್ದೀನ್ ಮಂಗಳೂರು, ಸಿ.ಎಮ್, ಫಾರೂಕ್, ಚಾರಿಟೇಬಲ್ ಟ್ರಸ್ಟ್ ನ ಪ್ರಮುಖರು ಉಪಸ್ಥಿತರಿದ್ದರು.

 ಟ್ರಸ್ಟ್ ನ ಸಲಹಾ ಸಮಿತಿ ಸದಸ್ಯ ಹನೀಫ್ ಖಾನ್ ಕೋಡಾಜೆ ಪ್ರಸ್ತಾವನೆಗೈದರು.ಪ್ರಧಾನ ಕಾರ್ಯದರ್ಶಿ ಹಾಶೀರ್ ಪೇರಿಮಾರ್ ಸ್ವಾಗತಿಸಿದರು. ಸಲಾಂ ಸುಜೀರ್ ವಂದಿಸಿದರು.

By suddi9

Leave a Reply

Your email address will not be published. Required fields are marked *