ಬಂಟ್ವಾಳ: ಸುಸಜ್ಜಿತ ಎಲ್ಲಾ ವ್ಯವಸ್ಥೆಗಳನ್ನು ಹೊಂದಿರುವ ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಹಲವು ಸಮಯದಿಂದ ಖಾಲಿ ಇರುವ ಪ್ರಸೂತಿ  ಮತ್ತು ಅರಿವಳಿಕೆ ತಜ್ಞರನ್ನು ತಕ್ಷಣ ನಿಯುಕ್ತಿಗೊಳಿಸುವಂತೆ ಬೆಂಗಳೂರಿನಲ್ಲಿ ಗುರುವಾರ ನಡೆದ ಕರ್ನಾಟಕ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ಬಂಟ್ವಾಳ ಶಾಸಕರಾದ  ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಹಿರಿಯ ಅಧಿಕಾರಿಗಳ ಗಮನಸೆಳೆದಿದ್ದಾರೆ.


ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ  ಸಂಬಂಧಿಸಿದ ಭರವಸೆಗಳ ಚರ್ಚೆಯ ಸಂದರ್ಭದಲ್ಲಿ ಶಾಸಕರು, ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಅಧಿಕಾರಗಳ ಗಮನಕ್ಕೆ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಲ್ಲಿ ಪರಿಹರಿಸುವಂತೆ ಅಗ್ರಹಿಸಿದ್ದಾರೆ.


ಬಂಟ್ವಾಳ ನಗರದ ಕೇಂದ್ರಸ್ಥಾನದಲ್ಲಿರುವ ಸರಕಾರಿ ಆಸ್ಪತ್ರೆ ಸಕಲ ವ್ಯವಸ್ಥೆಯನ್ನು ಹೊಂದಿದ್ದರೂ, ಹೆರಿಗೆಗಾಗಿ  ಬರುವ ಬಡವರು ಪ್ರಸೂತಿ ತಜ್ಞರಿಲ್ಲದ ಕಾರಣ, ಬೇರೆ ಆಸ್ಪತ್ರೆ ನೋಡುತ್ತಿದ್ದಾರೆ.ಪ್ರಸೂತಿ ಮಾತ್ರವಲ್ಲದೆ ಅತೀ ಅಗತ್ಯವಾಗಿ ಬೇಕಾದ ಪೂರ್ಣ ಪ್ರಮಾಣದ ಅನಸ್ತೇಶಿಯಾ ತಜ್ಞರೂ ಕೂಡ ಇಲ್ಲಿಲ್ಲ ಎಂದು ಶಾಸಕ ರಾಜೇಶ್ ನಾಯ್ಕ್ ಅವರು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ

ಈ ಸಂದರ್ಭಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, ಆಯುಕ್ತರಾದ ಶಿವಕುಮಾರ್ ಕೆ. ಬಿ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.ಕಳೆದ ಮೂರು ವರ್ಷಗಳಿಂದ ಬಂಟ್ವಾಳ ನಗರದ ಕೇಂದ್ರ ಸ್ಥಾನದಲ್ಲಿರುವ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಅರಿವಳಿಕೆ ತಜ್ಞರ ಹುದ್ದೆ ಖಾಲಿ ಇದೆ. ಪ್ರಸೂತಿ ತಜ್ಞರಿಲ್ಲದೆ ಹೆರಿಗೆಗಾಗಿ ಬರುವ ಮಹಿಳೆಯರು ಬೇರೆ ಆಸ್ಪತ್ರೆಗೆ ತೆರಳುತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಆದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಲ್ಲಿ ವೈದ್ಯಾಧಿಕಾರಿಗಳು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ,ಇತ್ತೀಚೆಗೆ ಜಿಲ್ಲಾ ಕೆಡಿಪಿ ಸಭೆಯಲ್ಲಿಯು ಶಾಸಕ ರಾಜೇಶ್ ನಾಯ್ಕ್ ಸಚಿವರ ಗಮನ ಸೆಳೆದಿದ್ದು,ತಕ್ಷಣ ಈ ಎರಡು ಹುದ್ದೆ ಭರ್ತಿಗೊಳಿಸುವ ಭರವಸೆ ನೀಡಿದ್ದಾರೆಯೇ ವಿನಹ ಇನ್ನೂ ನೇಮಕವಾಗಿಲ್ಲ

By suddi9

Leave a Reply

Your email address will not be published. Required fields are marked *