ಮಂಗಳೂರು: ಒಂದು ಕಡೆ ಕಿತ್ತುತಿನ್ನುತ್ತಿರುವ ಬಡತನ, ಮತ್ತೊಂದೆಡೆ ತನಗೆ ಎರಗಿದ ಕ್ಯಾನ್ಸರ್ ರೋಗವನ್ನು ಗುಣಪಡಿಸಲು ಪರದಾಡುತ್ತಿರುವ ಪತ್ನಿಯ ಬವಣೆಯನ್ನು ಕಂಡು ಇಲ್ಲೊಬ್ಬರು ನತದೃಷ್ಟ ವ್ಯಕ್ತಿ ಓದುಗರಲ್ಲಿ ದೇಹಿ ಎಂದು ಅಂಗಲಾಚುತ್ತಿದ್ದಾರೆ.
ಈ ಮೊದಲು ನೀರುಮಾರ್ಗದಲ್ಲಿ ವಾಸವಾಗಿದ್ದ ಸದ್ಯ ಮೂಡಿಗೆರೆ ತಾಲೂಕಿನ ಕಳಸದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ರಮೇಶ್ ರೋಶನ್(39) ಈ ರೀತಿ ಅಂಗಲಾಚುತ್ತಿರುವ ಕ್ಯಾನ್ಸರ್ ಪೀಡಿತ ವ್ಯಕ್ತಿ.

rameshroshan
ಕಳೆದ ಆರು ತಿಂಗಳಿನಿಂದ ಶಿವಮೊಗ್ಗದ ಮಲ್ಲಿಕಾರ್ಜುನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಷನ್ ಅವರಿಗೆ ಈಗಾಗಲೇ ಎರಡು ಬಾರಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಇದಕ್ಕೆ ಆರು ಲಕ್ಷ ರೂ. ಖರ್ಚಾಗಿದೆ. ಈಗ ಮಂಗಳೂರಿನ ಯೇನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ರೋಷನ್ ಈ ಮೊದಲು ಡ್ರೈವರ್ ಆಗಿದ್ದುಕೊಂಡು ಸಂಸಾರವನ್ನು ಪಾಲಿಸುತ್ತಿದ್ದರು. ಆದರೆ ಕ್ಯಾನ್ಸರ್ನ ಕಾರಣ ಚಿಕಿತ್ಸೆಗೆಂದು ತಿಂಗಳಿಗೆ 40 ಸಾವಿರ ರೂ. ಖಚರ್ು ತಗಲುತ್ತಿದ್ದು, ಲಕ್ಷಾಂತರ ರೂ. ಸಾಲ ಮಾಡಲಾಗಿದೆ. ಮುಂದಿನ ಚಿಕಿತ್ಸೆಯ ವೆಚ್ಚ ಭರಿಸಲು ಓದುಗರ ಮುಂದೆ ಕೈಯ್ಯೊಡ್ಡುತ್ತಿರುವ ರಮೇಶ್ ರೋಷನ್ ಅವರು ದಾನಿಗಳ ನಿರೀಕ್ಷೆಯಲ್ಲಿದ್ದಾರೆ.

ರಮೇಶ್ ರೋಷನ್ ಅವರ ಪರಿಸ್ಥಿತಿಯನ್ನು ಕಂಡು ಓದುಗರು  ಧನಸಹಾಯ ಮಾಡಬಹುದು. ಹೆಚ್ಚಿನ ಮಾಹಿತಿಗೆ ರೋಷನ್ ಅವರ ಪತ್ನಿ ಪ್ರಮೀಳಾ(9448724869) ಅವರನ್ನು ಸಂಪಕರ್ಕಿಸಬಹುದು. ಬ್ಯಾಂಕ್ ವಿವರ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಖಾತೆ ಸಂಖ್ಯೆ: 34318147352, ಬ್ರಾಂಚ್ ಕೋಡ್: 17851, ಬ್ರಾಂಚ್: ಕಳಸ, ಐಎಫ್ಎಸ್ಸಿ ಸಂ: ಎಸ್ಬಿಐಎನ್0017851

By suddi9

Leave a Reply

Your email address will not be published. Required fields are marked *