ನವದೆಹಲಿ: ಜಾರ್ಖಂಡ್ ಹಾಗೂ ಜಮ್ಮುಕಾಶ್ಮೀರಾದಲ್ಲಿ ಕಾಂಗ್ರೆಸ್ ಧೂಳೀಫಟವಾಗಿದ್ದು ಕಾಂಗ್ರೆಸೇತರ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಯುವುದು ನಿಚ್ಚಳಗೊಂಡಿದೆ.
ಜಾರ್ಖಂಡ್ನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವ ಲಕ್ಷ್ಣಗಳು ಬಹುತೇಕ ಸ್ಪಷ್ಟಗೆಂಡಿದೆ. ಆದರೆ ಜಮ್ಮುಕಾಶ್ಮಿರದಲ್ಲಿ ಪಿಡಿಪಿ-ಬಿಜೆಪಿ ಸಮಬಲ ಹೊಂದುತ್ತಾ ಬರುತ್ತಿದ್ದು ಅತಂತ್ರ ಸ್ಥಿತಿ ನಿರ್ಮಾಣಗಂಡಿದೆ.
ಮ್ಯಾಜಿಕ್ ನಂಬರ್ 44: ಜಮ್ಮು ಕಾಶ್ಮೀರದಲ್ಲಿ ಅಧಿಕಾರದ ಯಾವುದಾದರೂ ಪಕ್ಷವೊಂದು ಅಧಿಕಾರದ ಗದ್ದುಗೆ ಏರಬೇಕಾದರೆ ಮ್ಯಾಜಿಕ್ ನಂಬರ್ 44 ತಲುಪಬೇಕು. ಆದರೆ ಇದುವರೆಗಿನ ಮಾಹಿತಿ ಪ್ರಕಾರ ಬಿಜೆಪಿ ಹಾಗೂ ಪಿಡಿಪಿ ಮ್ಯಾಝಿಕ್ ನಂಬರ್ ದಾಟಿದ್ದು ಸರಕಾರ ರಚಿಸುವ ಕಾರ್ಯ ತೆರೆಮರೆಯಲ್ಲಿ ಆರಂಭಗೊಂಡಿದೆ.

bjp1 copy

bjp2
ಜ&ಕಾ.ದಲ್ಲಿ 87 ಸ್ಥಾನಗಳ ಪೈಕಿ ಪಿಡಿಪಿ 30, ಬಿಜೆಪಿ 24, ಎನ್ಸಿ 11 ಕಾಂಗ್ರೆಸ್ 16 ಹಾಗೂ ಇತರರು 6 ಸ್ಥಾನಗಳನ್ನು ಗಳಿಸಿದೆ.
ಜಾರ್ಖಂಡ್: ಬಿಜೆಪಿ 39, ಜೆಎಂಎಂ 22, ಕಾಂಗ್ರೆಸ್ 7, ಹಾಗೂ ಇತರರು 5 ಗಳಿಸಿದೆ.
ಎರಡೂ ರಾಜ್ಯಗಳ ಚುನಾವಣೆಯ ಪೈಕಿ ಕಾಂಗ್ರೆಸ್ ಹೀನಾಯವಾಗಿ ನೆಲಕಚ್ಚಿದ್ದು ಕಾಂಗ್ರೆಸ್ ಪಾಳಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಜಮ್ಮುಕಾಶ್ಮೀರದಲ್ಲಿ ಮೈತ್ರಿ ಸರಕಾರ: ರಾಜ್ ನಾಥ್ ಸಿಂಗ್
ಜಮ್ಮುಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣಗೊಂಡ ನಿಟ್ಟಿನಲ್ಲಿ ಪಿಡಿಪಿ ಹಾಗೂ ಬಿಜೆಪಿ ಸರಕಾರದ ಮೈತ್ರಿ ಸರಕಾರ ಸೇರಿ ಮೈತ್ರಿ ಸರಕಾರ ರಚಿಸಲಿದೆ ಎಂದು ಹೇಳಿಕೊಂಡಿದೆ. ಬಿಜೆಪಿ ಮುಖಂಡ ರಾಜ್ ನಾಥ್ ಸಿಂಗ್ ಮಾತಾಡಿ ಇದುವರೆಗಿನ ಇತಿಹಾಸದಲ್ಲಿ ಜ&ಕಾ.ದಲ್ಲಿ ಬಿಜೆಪಿ ಇಷ್ಟು ಸ್ಥಾನಗಳನ್ನು ಗಳಿಸಿರುವುದು ಹೆಚ್ಚುಗಾರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಪಿಡಿಪಿ-ಬಿಜೆಪಿ ಸುಭೀಕ್ಷ ಸರಕಾರ ನೀಡಲಿದೆ ಎಂದು ಹೇಳಿದ್ದಾರೆ.
ಜಾರ್ಖಂಡ್ ನಲ್ಲಿ ಸ್ಥಿರ ಸರಕಾರ : ಬಿಜೆಪಿಯ ಅರ್ಜುನ್ ಮುಂಡಾ
ಜಾರ್ಖಂಡ್ ನಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಗೆದ್ದುಕೊಂಡಿದ್ದು ರಾಜ್ಯದಲ್ಲಿ ಸ್ಥಿರಕಾರವನ್ನು ನೀಡಲಿದೆ ಎಂದು ಬಿಜೆಪಿ ಮುಖಂಡ ಅರ್ಜುನ್ ಮುಂಡಾ ಹೇಳಿದ್ದಾರೆ

By suddi9

Leave a Reply

Your email address will not be published. Required fields are marked *