ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವೀರರಾಣೀ ಅಬ್ಬಕ್ಕ ಉತ್ಸವ ಸಮಿತಿ ಯ ಆಶ್ರಯದಲ್ಲಿ ತುಂಬೆಯಲ್ಲಿ ಬಿ.ಎ.ಕಾಲೇಜಿನ ಆವರಣದಲ್ಲಿ ಸಂಪನ್ನ ಗೊಳ್ಳುತ್ತಿರುವ ವೀರರಾಣಿ ಅಬ್ಬಕ್ಕ ಉತ್ಸವಕ್ಕೆ ಮುನ್ನ ನಡೆದ ಜನಪದ ವೈವಿಧ್ಯದ ಜಾನಪದ ದಿಬ್ಬಣ ಹೆದ್ದಾರಿಯಲ್ಲಿ ಸಂಭ್ರಮದಿಂದಲೇ ಸಾಗಿಬಂತು. ಫರಂಗಿಪೇಟೆ ಜಂಕ್ಷನ್ ನಲ್ಲಿ ಆರಂಭಗೊಂಡ ಜಾನಪದ ದಿಬ್ಬಣಕ್ಕೆ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ ಉದ್ಘಾಟಿಸಿದರು.

5

8

6

7
3 (2)

2 (1)

ವಿವಿಧ ಕಲಾತಂಡಗಳಾದ ಕೊಂಚಾಡಿಯ ಮೂಕಾಂಬಿಕಾ ಚೆಂಡೆ ತಂಡ, ಬಂಟ್ವಾಳ ದ ತಾಲೀಮು ತಂಡ, ಶಾರದಾ ಆಟ್ಸರ್್ನ ಬೊಂಬೆಗಳು,ಕೀಲುಕುದುರೆ, ಕರಗ ಕುಣಿತ, ಬ್ಯಾಂಡ್ ಸೆಟ್, ಕನ್ಯಾನದ ಗಿರಿ-ಸಿರಿ ಕಲಾತಂಡದ ಡೋಲು ನಲಿಕೆ, ಪೂಜಾಕುಣಿತ, ಅಬ್ದುಲ್ ಹಝೀಜ್ ನೇತೃತ್ವದ ಧಫ್ ನೃತ್ಯ , ಹಾಲಕ್ಕಿ ಕುಣಿತ, ಯಕ್ಷಗಾನ ವೇಷಗಳು, ನವಿಲು ಕುಣಿತ, ಬಣ್ಣಬಣ್ಣದ ಕೊಡೆಗಳು ಮೆರವಣಿಗೆಗೆ ಮೆರುಗು ನೀಡಿದವು.
ಆರೋಗ್ಯ ಸಚಿವ ಯು.ಟಿ.ಖಾದರ್, ತುಂಬೆ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ವಳವೂರು. ಮಾಜಿ ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್, ಉತ್ಸವ ಸಮಿತಿಯ ಕಾಯರ್ಾಧ್ಯಕ್ಷ ದಿನಕರ್ ಉಳ್ಳಾಲ್, ಪ್ರಧಾನಕಾರ್ಯದಶರ್ಿ ಭಾಸ್ಕರ್ ರೈ ಕುಕ್ಕುವಳ್ಳಿ, ತುಂಬೆ ಕಾಲೇಜಿನ ಪ್ರಾಂಶುಪಾಲರಾದ ಗಂಗಾಧರ ಆಳ್ವ, ಸೇವಾಂಜಲಿ ಪ್ರತಿಷ್ಠಾನದ ಕೆ.ಕೆ.ಪೂಂಜಾ ಮೊದಲಾವರು ಮೆರವಣಿಗೆಯ ನೇತೃತ್ವ ವಹಿಸಿದ್ದರು

By suddi9

Leave a Reply

Your email address will not be published. Required fields are marked *