ಬಂಟ್ವಾಳ: ಸಹೋದರಿಗೆ ಅಕ್ರಮ ಗರ್ಭ ಕರುಣಿಸಿ, ಕೈಕೊಡಲು ಪ್ರಯತ್ನಿಸಿದ ಯುವಕರನ್ನು ಗ್ರಾಮಸ್ಥರೇ ಹಿಡಿದು ಮದುವೆ ಮಾಡಿದ ಘಟನೆ ತಾಲೂಕಿನಲ್ಲಿ ನಡೆದಿದೆ. ಸ್ನೇಹಿತರ ಪ್ರೀತಿಗೆ ಮರುಳಾಗಿ ಮದುವೆಗೆ ಮೊದಲೇ ದೈಹಿಕ ಸಂಪರ್ಕ ನಡೆಸಿ ಸಹೋದರಿಯರ ಪೈಕಿ ಒಬ್ಬಾಕೆಗೆ ಕಳೆದ ಶನಿವಾರ ನೂಜಿ ದೇವಸ್ಥಾನದಲ್ಲಿ ಗ್ರಾಮಸ್ಥರು ವಿವಾಹ ಮಾಡಿಸಿದರೆ ಇನ್ನೊರ್ವಳಿಗೆ ವಂಚಿಸಿ ತಲೆಮರೆಸಿಕೊಂಡಿದ್ದ ಯುವಕನನ್ನೂ ಹಿಡಿದು ಮದುವೆಗೆ ಒಪ್ಪಿಸಿ ಸೋಮವಾರ ಬಿ.ಸಿ.ರೋಡಿನಲ್ಲಿ ಮದುವೆ ಮಾಡುವಲ್ಲಿ ಯಶಸ್ವಿಯಾಗಿದಾರೆ.
1 (3)

2 (2)
ನೂಜಿ ನಿವಾಸಿ ಕೃಷ್ಣ ನಾಯ್ಕರಿಗೆ ಮೂರು ಮಂದಿ ಹೆಣ್ಣು ಮಕ್ಕಳು. ಈ ಪೈಕಿ ಒಬ್ಬಕೆಗೆ ಮದುವೆಯಾಗಿದ್ದು ನಳಿನಿ (24) ಹಾಗೂ ರಜನಿ(20) ಇನ್ನಿಬ್ಬರು ಪುತ್ರಿಯರು. ಸಾಲೆತ್ತೂರು ಬಳಿಯ ಕುಳಾಲು ನಿವಾಸಿ ಗೋಪಾಲ ಹಾಗೂ ಬೋಳಂತೂರು ಮನೋಲಿ ತೋಟ ನಿವಾಸಿ ಅಶೋಕ್ನ ಕಪಟ ಪ್ರೀತಿಗೆ ಸಹೋದರಿಯರಾದ ನಳಿನಿ ಹಾಗೂ ರಜನಿ ಬಲಿ ಬಿದ್ದಿದ್ದರು. ಅಚ್ಚರಿಯೆಂದರೆ ಗೋಪಾಲ ಹಾಗೂ ಅಶೋಕ್ ಪರಸ್ಪರ ಸ್ನೇಹಿತರು. ಸ್ಥಳೀಯವಾಗಿ ಕೂಲಿ ಕೆಲಸ ನಿರ್ವಹಿಸಿಕೊಂಡು ಸಹೋದರಿಯಯರನ್ನು ತಮ್ಮ ಪ್ರೀತಿಯ ಬಲೆಗೆ ಹಾಕಿಕೊಳ್ಳುವಲ್ಲಿ ಇಬ್ಬರೂ ಯಶಸ್ವಿಯಾಗಿದ್ದರು. ಜೋಡಿಗಳ ಪ್ರೀತಿ ದೈಹಿಕ ಸಂಪರ್ಕದವರೆಗೆ ಮುಂದುವರೆದ ಪರಿಣಾಮ ಸಹೋದರಿಯರಿಬ್ಬರೂ ಏಕಕಾಲದಲ್ಲಿ ಗರ್ಭ ಧರಿಸಿದ್ದರು.
ಕಳೆದ ಕೆಲ ದಿನಗಳ ಹಿಂದೆ ರಜನಿಗೆ ಹೆರಿಗೆ ನೋವು ಕಾಣಿಸಿಕೊಂಡು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಅಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ರಜನಿ ಮಗುವನ್ನು ಸಾಲೆತ್ತೂರು ಬಳಿ ಪೊದೆಯಲ್ಲಿ ಬಿಟ್ಟು ತೆರಳಿದ್ದಳು. ಈ ವಿಚಾರ ತಿಳಿದ ಸ್ಥಳೀಯ ಪ್ರಮುಖರು ಆಕೆಯನ್ನು ವಿಚಾರಣೆಗೊಳಪಡಿಸಿದಾಗ ಘಟನೆಗೆ ಕಾರಣನೆನ್ನಲಾದ ಅಶೋಕ್ ಬಗ್ಗೆ ಮಾಹಿತಿ ನೀಡಿದ್ದಳು. ಮಾತ್ರವಲ್ಲದೆ ಸಹೋದರಿ ನಳಿನಿಯೂ ಗೋಪಾಲ ಎಂಬಾತನಿಂದ ಗರ್ಭ ಧರಿಸಿದ್ದು ಕೆಲವೇ ದಿನದಲ್ಲಿ ಮಗುವಿಗೆ ಜನ್ಮ ನೀಡಲಿರುವ ಸತ್ಯಾಂಶವನ್ನು ಬಿಚ್ಚಿಟ್ಟಿದ್ದಳು. ರಜನಿಗೆ ಮಗುವನ್ನು ಕರುಣಿಸಿ ತಲೆಮರೆಸಿಕೊಂಡಿದ್ದ ಅಶೋಕ್ನನ್ನು ಗ್ರಾಮಸ್ಥರು ದೈವಕೋಲವೊಂದರಲ್ಲಿ ಪತ್ತೆಹಚ್ಚಿದ್ದು ನೆರವಿಗಾಗಿ ಪೊಲೀಸರ ಮೊರೆ ಹೋಗಿದ್ದರು. ಸೋಮವಾರ ಬೆಳಿಗ್ಗೆ ಪೊಲಿಸರು ಆತನ ಮನೆಯಿಂದಲೇ ಹಿಡಿದು ತಂದು ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ಮಾತುಕತೆ ನಡೆಸಿ ವಿವಾಹವಾಗುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿ ಆತನ ಒಪ್ಪಿಗೆಯಂತೆ ದಿಢೀರ್ ಮದುಗೆಗೆ ಸಿದ್ದತೆ ನಡೆಸಿದರು. ಅದರಂತೆ ಅಶೋಕ್ ಮತ್ತು ರಜನಿಯ ವಿವಾಹ ಸೋಮವಾರ ಬಿ.ರೋಡಿನ ರಕ್ತೇಶ್ವರೀ ದೇವಿಯ ಸಮ್ಮುಖದಲ್ಲಿ ನಡೆಯಿತು. ಹಿರಿಯರು, ಗ್ರಾಮಸ್ಥರ ಸಮ್ಮುಖದಲ್ಲಿ ನವ ಜೋಡಿ ಹಾರ ಬದಲಾಯಿಸಿ, ಮಾಂಗಲ್ಯಧಾರಣೆ ನಡೆಸಿದರು. ಈ ಸಂದರ್ಭ ಮಾಜಿ ಎಪಿಎಂಸಿ ಅಧ್ಯಕ್ಷ ನೇಮಿರಾಜ, ರಾಮದಾಸ ಬಂಟ್ವಾಳ ಮತ್ತಿತರರು ಹಾಜರಿದ್ದರು. ಸ್ಥಳೀಯ ಮಹಿಳೆಯರಾದ ಕಮಲ, ಗೌರಿ, ಯಶೋದಾ, ಸರೋಜಿನಿ, ಪ್ರಮೀಳಾ, ಸುಗುಣ, ವಿಲಾಸಿನಿ, ಕಾವೇರಿ, ಪಲ್ಲವಿ ವಂಚನೆಗೊಳಗಾದ ಸಹೋದರಿಯರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಮುಂಚೂಣಿಯಲ್ಲಿದ್ದರು. ವಂಚನೆಗೊಳಗಾದ ಯುವತಿಯರಿಗೆ ದಾಂಪತ್ಯ ಜೀವನ ಕರುಣಿಸುವಲ್ಲಿ ವಿಟ್ಲ ಹಾಗೂ ಬಂಟ್ವಾಳ ಗ್ರಾಮೀಣ ಪೊಲೀಸರು ಶ್ರಮ ವಹಿಸಿದ್ದರು.

By suddi9

Leave a Reply

Your email address will not be published. Required fields are marked *