ಮೂಡುಬಿದರೆ: ಮಾರೂರು ನೂಯಿಯಲ್ಲಿ ನಿಮರ್ಾಣವಾಗಿರುವ `ಬಲಿಪ ಅಮೃತ ಭವನದ ಸಮರ್ಪಣಾ ಸಮಾರಂಭ’ ಫೆ. 1ರಂದು ನಡೆಯಲಿದೆ ಎಂದು ಬಲಿಪ ಭಾಗವತ ಮಿತ್ರವೃಂದದ ಸಂಚಾಲಕ ಡಾ.ಎಂ. ಪ್ರಭಾಕರ ಜೋಶಿ ತಿಳಿಸಿದ್ದಾರೆ.

ಸುಮಾರು ರೂ. 13 ಲಕ್ಷವೆಚ್ಚದಲ್ಲಿ ನಿಮರ್ಾಣವಾಗಿರುವ `ಬಲಿಪ ಅಮೃತ ಭವನ’ವನ್ನು ಫೆ. 1ರಂದು ಅಪರಾಹ್ನ 4.15ಕ್ಕೆ ಸಚಿವ ಕೆ. ಅಭಯಚಂದ್ರ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಕಾರದ ಆಯುಕ್ತ, ಕಲಾಪೋಷಕ ಟಿ. ಶ್ಯಾಮ ಭಟ್ ಸಮರ್ಪಣೆಗೈಯಲಿರುವರು. ಇದಕ್ಕೂ ಮುನ್ನ, ಮಧ್ಯಾಹ್ನ 2 ಗಂಟೆಯಿಂದ ರಘರಾಮ ಹೊಳ್ಳ, ಪಟ್ಲ ಸತೀಶ ಶೆಟ್ಟಿ, ಪ್ರಫುಲ್ಲ ಚಂದ್ರ ನೆಲ್ಯಾಡಿ, ಪುಂಡಿಕಾ ಗೋಪಾಲಕೃಷ್ಣ ಭಾಗವತ, ಜನಾರ್ದನ ತೋಳ್ಪಾಡಿತ್ತಾಯ, ಚಂದ್ರಶೇಖರ ಕೊಂಕಣಾಜೆ, ದೇವಾನಂದ ಭಟ್ ಇವರಿಂದ ಯಕ್ಷಗಾನ ಭಾಗವತಿಕೆಯನ್ನು ಏರ್ಪಡಿಸಲಾಗಿದೆ.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಅಧ್ಯಕ್ಷ ಕೆ. ಶ್ರೀಪತಿ ಭಟ್ ಉಪಸ್ಥಿತರಿದ್ದರು.