ಸುದ್ದಿ9 ಬಂಟ್ವಾಳ: ಕಲಿಕೆಯಿಂದ ವಿಜ್ಞಾನ ಆರಂಭ, ಅಂತಹ ಜ್ಣಾನ ಪ್ರದರ್ಶನವಾದಾಗ ಅದು ಇತರರಿಗೆ ಪ್ರೇರಣೆಯಾಗುವುದು ಈ ನಿಟ್ಟಿನಲ್ಲಿ ಪ್ರತಿಭಾವಂತ ಗ್ರಾಮೀಣ ಮಕ್ಕಳಿಗೆ ಇಂತಹ ಕಾರ್ಯಕ್ರಮ ವೇದಿಕೆಯಾಗಿದೆ ಎಂದು ಸಚ್ಚಿದಾನಂದ ಶೆಟ್ಟಿ ಹೇಳಿದರು. ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮತ್ತು ಬಾಲಭವನ ಸಮಿತಿ ಬಂಟ್ವಾಳ ಹಾಗೂ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಡ ಶಾಲೆ ಶಂಭೂರು ಇದರ ಸಂಯುಕ್ತ ಆಶ್ರಯದಲ್ಲಿ ಅಂತರ ಶಾಲಾ ವಿಜ್ಞಾನ ಮಾದರಿಗಳ ಪ್ರದರ್ಶನ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವೈಜ್ಷಾನಿಕ ಮನೋಭಾವವನ್ನು ಬೆಳೆಸಲು ಹೆತ್ತವರ ಸಹಕಾರ ಕೂಡಾ ಅತೀ ಅಗತ್ಯ ಎಂದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ತಾ.ಪಂ.ಸದಸ್ಯ ಆನಂದ ಶಂಭೂರು ವಹಿಸಿದ್ದರು.ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ಮಂಗಳೂರು ಸಿ.ಡಿ.ಪಿ.ಒ ಉಸ್ಮಾನ್, ಶಾಲಾ ಮುಖ್ಯೋಪಾಧ್ಯಯ ನೋಣಯ್ಯ ಮತ್ತು ಶಿಕ್ಷಣ ಸಂಯೋಜಕಿ ಸುಜಾತ ಉಪಸ್ಥಿತರಿದ್ದರು. ಎ.ಸಿ.ಡಿ.ಒ ಅನ್ನಪೂರ್ಣ ಸ್ವಾಗತಿಸಿ ಕಮಲಾಕ್ಷ ವಂದಿಸಿದರು. ಮೇಲ್ವಿಚಾರಕಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.
