ಬಂಟ್ವಾಳ: ಆಲದಪದವು ಅಕ್ಷರ ಪ್ರತಿಷ್ಠಾನದ ವತಿಯಿಂದ ಅಕ್ಷರ ಆಯನ-ಸಾಹಿತ್ಯ, ಸಾಂಸ್ಕೃತಿಕ ಸಮ್ಮಿಲನ ಸಮಾರಂಭವು ಫೆ.7 ರಂದು ಅಪರಾಹ್ನ 1.30ರಿಂದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಸಂಚಾಲಕ ಗೋಪಾಲ ಅಂಚನ್ ಹಾಗೂ ನಿರ್ದೇಶಕ ರತ್ನದೇವ್ ಪುಂಜಾಲಕಟ್ಟೆ ತಿಳಿಸಿದ್ದಾರೆ.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಲ್ಕೂರ ಪ್ರತಿಷ್ಠಾನ ಮಂಗಳೂರು ಸಹಯೋಗದೊಂದಿಗೆ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಸಾಹಿತ್ಯ-ಸಂಸ್ಕೃತಿಯ ಪಾತ್ರ ಎಂಬ ಆಶಯದಡಿ ಕಾರ್ಯಕ್ರಮ ನಡೆಯಲಿದ್ದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸುವರು. ಶ್ರೀ ಕ್ಷೇತ್ರ ಪಾಂಗಲ್ಪಾಡಿಯ ಆಡಳಿತ ಧರ್ಮದರ್ಶಿ ಉದಯ ಪಾಂಗಣ್ಣಾಯ ಉದ್ಘಾಟಿಸುವರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೋ. ತುಕಾರಾಂ ಪೂಜಾರಿ ಅಕ್ಷರ ಪ್ರತಿಷ್ಠಾನದ “ದಶಾಕ್ಷರ” ಕೃತಿಯನ್ನು ಬಿಡುಗಡೆ ಮಾಡುವರು. ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಕೆ.ರಮೇಶ ನಾಯಕ್ ರಾಯಿ ಅವರಿಗೆ “ಅಕ್ಷರ ಗೌರವ ಪುರಸ್ಕಾರ” ಪ್ರದಾನ ನಡೆಯಲಿದ್ದು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ರಾಮಚಂದ್ರ ರಾವ್ ಪುರಸ್ಕೃತರ ಬಗ್ಗೆ ಮಾತಾನಾಡುವರು.
ಶ್ರೀ ಮಾಣಿಬೆಟ್ಟು ದುಗರ್ಾಂಬಿಕಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ಕೆ.ಬೆಳ್ಳಾರೆ, ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ನವೀನ ಪಿ.ಎಸ್., ತಾಲೂಕು ಪಂಚಾಯತು ಸದಸ್ಯ ರಮೇಶ ಪೂಜಾರಿ ಕುಡುಮೇರು, ಗ್ರಾಮ ಪಂಚಾಯತು ಉಪಾಧ್ಯಕ್ಷ ಆನಂದ ಆಚಾರ್ಯ ಅತಿಥಿಗಳಾಗಿ ಭಾಗವಹಿಸುವರು.
ದ.ಕ.ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದೊಂದಿಗೆ ಬಿ.ಸಿ.ರೋಡು ಯಕ್ಷಲೋಕ ಸಾಂಸ್ಕೃತಿಕ ಸಂಗಮ ಕಲಾವಿದರಿಂದ ಸಮೂಹ ನೃತ್ಯ ದರ್ಶನ ನಡೆಯಲಿದೆ ಎಂದು ಎಂದು ಪ್ರತಿಷ್ಠಾನದ ಸಂಚಾಲಕ ಗೋಪಾಲ ಅಂಚನ್ ಹಾಗೂ ನಿರ್ದೇ ಶಕ ರತ್ನದೇವ್ ಪುಂಜಾಲಕಟ್ಟೆ ತಿಳಿಸಿದ್ದಾರೆ.