ತುಳುನಾಡ ತುಳುಶ್ರೀ ಪ್ರಶಸ್ತಿ ಪ್ರಧಾನ
ಸುದ್ದಿ9 ಬಂಟ್ವಾಳ: ಆಲದಪದವು ಅಕ್ಷರ ಪ್ರತಿಷ್ಠಾನದ ವತಿಯಿಂದ ತುಳುವ ತಮ್ಮನ-ಸಾಹಿತ್ಯ, ಸಾಂಸ್ಕ್ರತಿಕ ಮಿನದನ ಸಮಾರಂಭವು ಫೆ.8ರಂದು ಅಪರಾಹ್ನ 1.30ರಿಂದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಸಂಚಾಲಕ ಗೋಪಾಲ ಅಂಚನ್ ಹಾಗೂ ನಿರ್ದೇಶಕ ದಿನೇಶ್ ಅಮೀನ್ ಬಂಟ್ವಾಳ ತಿಳಿಸಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ತುಳು ಸಾಹಿತ್ಯ, ಸಂಸ್ಕ್ರತಿಯ ಬೆಳವಣಿಗೆಯಲ್ಲಿ ಸಂಘಟನೆಗಳ ಪಾತ್ರ ಎಂಬ ಆಶಯದಡಿ ಕಾರ್ಯಕ್ರಮ ನಡೆಯಲಿದ್ದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸುವರು. ಶ್ರೀ ಕ್ಷೇತ್ರ ಪಾಂಗಲ್ಪಾಡಿಯ ಧರ್ಮದರ್ಶಿ ಕೆ.ಲಕ್ಷ್ಮೀನಾರಾಯಣ ಉಡುಪ ಉದ್ಘಾಟಿಸುವರು.
ಸಾಹಿತಿ ಹಾಗೂ ಸಂಶೋಧಕ ಮುದ್ದು ಮೂಡುಬೆಳ್ಳೆಯವರಿಗೆ ಪ್ರತಿಷ್ಠಾನ ಕೊಡಮಾಡುವ ವಾರ್ಷಿಕ “ತುಳುನಾಡ ತುಳುಶ್ರೀ ಪ್ರಶಸ್ತಿ” ಯನ್ನು ಪ್ರದಾನ ಮಾಡಲಾಗುವುದು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ರಘು ಇಡ್ಕಿದು ಪ್ರಶಸ್ತಿ ಪುರಸ್ಕ್ರತರ ಬಗ್ಗೆ ಮಾತಾನಾಡುವರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್, ಜಿಲ್ಲಾ ಪಂಚಾಯತು ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರಾ, ಕಾವಳಮೂಡೂರು ಸೇವಾ ಸಹಕಾರಿ ಬ್ಯಾಂಕು ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ಕಕ್ಯಪದವು ಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸುವರು.
ಬಂಟ್ವಾಳ ಅರಿವು ಯುವ ಸಂವಾದ ಕೇಂದ್ರದ ಕಲಾವಿದರಿಂದ ತುಳು ಹಾಡುಗಳ ಗಾಯನ ನಡೆಯಲಿದೆ ಎಂದು ಎಂದು ಪ್ರತಿಷ್ಠಾನದ ಸಂಚಾಲಕ ಗೋಪಾಲ ಅಂಚನ್ ಹಾಗೂ ನಿರ್ದೇಶಕ ದಿನೇಶ್ ಅಮೀನ್ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *