ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಚಲನಚಿತ್ರ ನಟ ಬಿ. ಚೇತನ್ ರೈ ಮಾಣಿ ಇವರನ್ನು ಸನ್ಮಾನಿಸಲಾಯಿತು. ನಾರಾಯಣ ಮಯ್ಯ ಅರಸಿಕಟ್ಟೆ, ಅನಂತ ಆಚಾರ್ಯ, ಎನ್. ಬಾಲಕೃಷ್ಣ ಪಾಂಗಣ್ಣಾಯ, ಎಂ. ತುಂಗಪ್ಪ ಬಂಗೇರ, ಕೆ.ಪ್ರಮೋದ್ ಕುಮಾರ್ ರೈ, ಕೆ. ಲಕ್ಷ್ಮೀನಾರಾಯಣ ಉಡುಪ, ಸಂತೋಷ ಮೂರ್ಜೆ ಮತ್ತಿತರಿದ್ದರು.