ಸುದ್ದಿ9 ಬಂಟ್ವಾಳ: ಕಾಂಗ್ರೆಸ್ ನೇತಾರರು ಅಧಿಕಾರ ದುರುಪಯೋಗ ಪಡಿಸಿಕೊಂಡು ಹಿಂದೂ ನಾಯಕರ ಮೇಲೆ ಮೊಕದ್ದಮೆ ದಾಖಲಿಸಲು ಹುನ್ನಾರ ನಡೆಸುತ್ತಿದ್ದು, ಇಂತಹ ಯಾವುದೇ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾದರೆ ಬೀದಿಗಿಳಿದು ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಬಂಟ್ವಾಳ ತಾಲೂಕು ಹಿಂದೂ ಹಿತರಕ್ಷಣಾ ಸಮಿತಿಯ ಸಂಚಾಲಕ ಜಿತೇಂದ್ರ ಕೊಟ್ಟಾರಿ ಎಚ್ಚರಿಸಿದ್ದಾರೆ.
ಶನಿವಾರ ಸಂಜೆ ಬಿ.ಸಿ.ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾ.2ರಂದು ಬಿ.ಸಿ.ರೋಡಿನಲ್ಲಿ ಶಾಂತಿಯುತವಾಗಿ ನಡೆದ ಹಿಂದೂ ಸಂಗಮದಲ್ಲಿ ಪ್ರಧಾನ ಭಾಷಣಗೈದ ನಿಕೇತ್ ರಾಜ್ ಬೆಂಗಳೂರು, ಆರ್ಎಸ್ಎಸ್ನ ದಕ್ಷಿಣ ಮಧ್ಯಕ್ಷೇತ್ರಿಯ ಸಂಪರ್ಕ ಪ್ರಮುಖ್ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹಾಗೂ ತನ್ನ ವಿರುದ್ದ ಪ್ರಕರಣ ದಾಖಲಿಸಲು ಕಾಂಗ್ರೆಸ್ ನೇತಾರರು ಪೊಲೀಸ್ ಇಲಾಖೆಗೆ ಒತ್ತಡ ಹೇರುತ್ತಿದ್ದಾರೆಂದು ಅವರು ಆರೋಪಿಸಿದರು. ಒಂದು ವೇಳೆ ಪೊಲೀಸ್ ಇಲಾಖೆ ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸಿದ್ದಲ್ಲಿ ಸಂಘ ಪರಿವಾರದ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದ ಅವರ ಈ ಸಂದರ್ಭದಲ್ಲಿ ಯಾವುದೇ ಅನಾಹುತಗಳಾದರೆ ಇಲಾಖೆಯೇ ಹೊಣೆ ಹೊರಬೇಕಾದಿತು ಎಂದರು.
ಕೇಸು ದಾಖಲಿಸಲು ಕೋಟರ್್ ಆದೇಶ
ಮಾ.8ರಂದು ಕಲ್ಲಡ್ಕ ಜಂಕ್ಷನ್ನಲ್ಲಿ ನಡೆದ ಕಾಂಗ್ರೆಸ್ನ ಸಾಮರಸ್ಯ ಸಮಾವೇಶದ ವೇಳೆ ಉಂಟಾದ ಅಹಿತಕರ ಘಟನೆಯಲ್ಲಿ ಹಿಂದೂ ಯುವಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ದೂರು ನೀಡದ್ದರೂ ಬಂಟ್ವಾಳ ಸಿಐ ರಾಜಶೇಖರ ಮೇಸ್ತ್ರಿ ಪಕ್ಷಪಾತ ಧೋರಣೆ ಅನುಸರಿಸಿ ಕೇವಲ ಹಿಂದೂ ಕಾರ್ಯಕರ್ತರು ಹಾಗೂ ಮುಖಂಡರ ಮೇಲೆ ಕೇಸು ದಾಖಲಿಸಿದ್ದಾರೆ. ಇದರಿಂದ ಸಂತ್ರಸ್ತರಾದ ಇಬ್ಬರು ಬಂಟ್ವಾಳ ಹೆಚ್ಚುವರಿ ಸಿವಿಲ್ ನ್ಯಾಯಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಖಾಸಗಿ ಪಿಯರ್ಾದಿ ಸಲ್ಲಿಸಿದ್ದು ಇದರ ವಿಚಾರಣೆ ನಡೆಸಿದ ನ್ಯಾಯಾಧೀಶರು ಗಲಭೆಗೆ ಕಾರಣಕರ್ತರಾದ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಸಹಿತ ಇತರರ ಮೇಲೆ ಕೇಸು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಪೊಲೀಸರಿಗೆ ಆದೇಶ ನೀಡಿದೆ ಎಂದು ಜಿತೇಂದ್ರ ಕೊಟ್ಟಾರಿ ತಿಳಿಸಿದ್ದಾರೆ. ಬೊಂಡಾಲ ನಿವಾಸಿ ಗಿರಿಧರ ಎಂಬವರ ಪಿಯರ್ಾದಿಯಂತೆ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಇವರ ಕಾರು ಚಾಲಕ ತಾಳಿಪಡ್ಪು ನಿವಾಸಿ ಹಸೈನಾರ್, ಕಲ್ಲಡ್ಕ ನಿವಾಸಿ ಮಹಮ್ಮದ್ ಶಾಫಿ, ಯುವಕಾಮಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್ ನೆಟ್ಲ, ಕಲ್ಲಡ್ಕ ನಿವಾಸಿ ಬಿ.ಕೆ.ಅಬ್ದುಲ್ಲಾ, ಮಹಮ್ಮದ್ ರಶೀದ್, ಪುರುಷೋತ್ತಮ, ಗಾಣದ ಲಚ್ಚಿಲ್ ನಿವಾಸಿ ಸಂಜಿತ್, ಸಹಿತ ಇತರ 25 ಮಂದಿಯ ಮೇಲೆ ಹಾಗೂ ನೆಟ್ಲ ನಿವಾಸಿ ಪುಷ್ಪರಾಜ್ ಎಂಬವರ ಪಿಯರ್ಾದಿಯಂತೆ ಚಂದ್ರಪ್ರಕಾಶ್ ಶೆಟ್ಟಿ, ಕಲ್ಲಡ್ಕದ ವೆಲ್ಕಂ ಹೋಟೆಲ್ನ ಬಾವಾ, ರಿಕ್ಷಾ ಚಾಲಕ ಸಿದ್ದೀಕ್, ಫಾರೂಕ್, ಆರೀಸ್, ಸತ್ತಾರ್, ಕಬೀರ್, ಅಶ್ರಫ್, ಇಫರ್ಾನ್, ಮೊಹಮ್ಮದ್ ಕುಂಞ ಎಂಬವರ ವಿರುದ್ದ ನ್ಯಾಯಾಲಯದಲ್ಲಿ ಖಾಸಗಿ ಪಿಯರ್ಾದಿ ಸಲ್ಲಿಸಿದ್ದರು. ಈ ಕುರಿತಂತೆ ಜಿತೇಂದ್ರ ಕೊಟ್ಟಾರಿಯವರು ನ್ಯಾಯಾಲಯದಲ್ಲಿ ದಾಖಾಲಾದ ಪಿಯರ್ಾದಿಯ ಪ್ರತಿಯನ್ನು ಸುದ್ದಿಗೋಷ್ಟಿಯಲ್ಲಿ ಬಿಡುಗಡೆಗೊಳಿಸಿದರು. ನ್ಯಾಯಾಲಯದ ಆದೇಶದಂತೆ ಪೊಲೀಸರು ತಕ್ಷಣ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳ ಬೇಕು. ಇಲ್ಲದಿದ್ದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
ಸಿಐ ಎತ್ತಂಗಡಿ ಆಗ್ರಹ:
ಕಲ್ಲಡ್ಕದಲ್ಲಾದ ಗಲಭೆಗೆ ಸಂಬಂಧಿಸಿ ಬಂಟ್ವಾಳ ಸಿಐ ರಾಜಶೇಖರ್ ಮಿಸ್ತ್ರಿಯವರು ಏಕಪಕ್ಷೀಯವಾಗಿ ವತರ್ಿಸಿದ್ದು, ಅವರನ್ನು ಇಲ್ಲಿಂದ ಎತ್ತಂಗಡಿಗೊಳಿಸುವಂತೆ ಆಗ್ರಹಿಸಿದ ಅವರು ಪ್ರಾಮಾಣಿಕ ಮತ್ತು ಘಟನೆಯಂದು ಸ್ಥಳದಲ್ಲಿಲ್ಲದ ಮೂವರು ಸಿಬ್ಬಂದಿಗಳನ್ನು ವಗರ್ಾಯಿಸಿರುವುದು ಖಂಡನೀಯ
ಇದೇ ವೇಳೆ ಹಾಜರಿದ್ದ ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ.ಆನಂದ ಅವರು ಮಾತನಾಡಿ ಜಿ.ಪಂ.ಚಂದ್ರಪ್ರಕಾಶ್ ಶೆಟ್ಟಿಯವರು ತಮ್ಮ ಪ್ರಸ್ತಾವಿಕ ಭಾಷಣದ ಸಂದರ್ಭದಲ್ಲಿ ಹಿಂದೂ ಮುಖಂಡರು ಹಿಂದುಗಳಿಗೆ ಏನು ಮಾಡಿದ್ದಾರೆಂದು ಪ್ರಶ್ನಿಸಿರುವುದನ್ನು ಆಕ್ಷೇಪಿಸಿದರಲ್ಲದೆ ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರ ಸಾವು ಪ್ರಕರಣದ ಕುಟುಂಬಸ್ಥರಿಗೆ ಡಾ.ಪ್ರಬಾಕರ್ ಭಟ್ ನಿದರ್ೇಶನದತೆ ಟ್ರಸ್ಟ್ ಮೂಲಕ ಸಾವೀಗೀಡಾದವರ ಮಕ್ಕಳ ವಿದ್ಯಾಭ್ಯಾಸ ಮತ್ತು ಅವರ ವಿವಾಹದವರೆಗಿನ ಸಂಪೂರ್ಣ ಜವಬ್ದಾರಿ ವಹಿಸಲಾಗಿದೆ. ಇದು ಅವರಿಗೆ ಗೊತ್ತಿರಲಿ ಎಂದರು.
ಚರಣ್ ಜುಮಾದಿಗುಡ್ಡೆ, ರಾಜಾರಾಮ ನಾಯಕ್, ಪುರುಷ ಎನ್.ಸಾಲ್ಯಾನ್ ಸುದ್ದಿಗೋಷ್ಟಿಯಲ್ಲಿದ್ದರು.

By suddi9

Leave a Reply

Your email address will not be published. Required fields are marked *