ಮಂಗಳೂರು: ನಗರದ ಎಬಿ ಸರ್ಕಲ್ ಬಳಿ ಟ್ರಕ್ ಲಾರಿ ಬೈಕ್‍ನ ಮೇಲೆಯೇ ಹರಿದ ಪರಿಣಾಮ ಬೈಕ್ ಸವಾರ ಚಕ್ರದಡಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಮೃತರನ್ನು ಕೃಷ್ಣಾಪುರದ ನಿವಾಸಿ ಉಮರ್ ಫಾರೂಕ್ ಎಂದು ಗುರುತಿಸಲಾಗಿದೆ.

acc1

acc2
ಹಂಪನಕಟ್ಟೆಯಿಂದ ಬೈಕ್‍ನಲ್ಲಿ ಬರುತ್ತಿದ್ದ ಉಮರ್ ಅವರಿಗೆ ಬಂದರ್‍ನಿಂದ ಬರುತ್ತಿದ್ದ 10 ಚಕ್ರದ ಟ್ರಕ್ ಬೈಕ್‍ಗೆ ಡಿಕ್ಕಿ ಹೊಡೆದು ನಂತರ ಉಮರ್ ಅವರ ಮೇಲೆಯೇ ಹರಿದು ಈ ದುರ್ಘಟನೆ ಸಂಭವಿಸಿತು ಎನ್ನಲಾಗಿದೆ. ಉಮರ್ ಅವರು ಏಕಾರ್ಟ್ ಲಾಜಿಸ್ಟಿಕ್ ಕಂಪೆನಿ ಉದ್ಯೋಗಿ ಎಂದು ತಿಳಿದುಬಂದಿದೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

By suddi9

Leave a Reply

Your email address will not be published. Required fields are marked *