ಮೂಡುಬಿದರೆ: ಅಗ್ನಿಶಾಮಕ ಇಲಾಖೆಯಲ್ಲಿ 41 ವರ್ಷಗಳಿಂದ ಸೇವೆ ಸಲ್ಲಿಸಿ, ಮೂಡುಬಿದರೆ ಅಗ್ನಿಶಾಮಕ ಠಾಣೆಯಲ್ಲಿ ಸುಮಾರು 11 ವರ್ಷ ಅಗ್ನಿಶಾಮಕರಾಗಿ, ಕಳೆದ 6 ವರ್ಷಗಳಿಂದ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತರಾಗುತ್ತಿರುವ, ರಾಷ್ಟ್ರಪತಿ ಪದಕ ವಿಜೇತ ಅಂತಪ್ಪ ಅವರನ್ನು ಶನಿವಾರ ಬೀಳ್ಕೊಡಲಾಯಿತು.
ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಅಂತಪ್ಪ ಅವರನ್ನು ಸನ್ಮಾನಿಸಲಾಯಿತು.

ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಅಧ್ಯಕ್ಷತೆಯಲ್ಲಿ ಮೂಡುಬಿದರೆ ಅಗ್ನಿಶಾಮಕ ಠಾಣೆಯಲ್ಲಿ ನಡೆದ ಸಮಾರಂಭದಲ್ಲಿ ಅಂತಪ್ಪ ದಂಪತಿಯನ್ನು ಸನ್ಮಾನಿಸಲಾಯಿತು.
ಉದ್ಯಮಿ ಕೆ. ಶ್ರೀಪತಿ ಭಟ್ ಮತ್ತು ಇತರ ಅತಿಥಿಗಳು ಅಂತಪ್ಪ ಮತ್ತು ಶ್ರೀಮತಿ ಸುಮಿತ್ರ ಸಂಪತಿಗಳನ್ನು ಸನ್ಮಾನಿಸಿದರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಿವಪ್ಪ ಗೌಡ ಪ್ರಾಮಾಣಿಕ ರೀತಿಯಲ್ಲಿ ವೃತ್ತಿಗೆ ಸಮರ್ಪಣೆ ಮಾಡಿಕೊಳ್ಳುವ ಅಂತಪ್ಪ ಅಧಿಕಾರಿ ಅಪರೂಪ ಎಂದರು.
ಮೂಡುಬಿದರೆ ಲಯನ್ಸ್ ಅಧ್ಯಕ್ಷ ಅಲ್ವಿನ್ ಮಿನೇಜಸ್ ಗಂಟಾಲ್ಕಟ್ಟೆ, ಮಂಗಳೂರು ಎಪಿಎಂಸಿ ಸದಸ್ಯ ಜೊಸ್ಸಿ ಮಿನೇಜಸ್, ಸ್ಥಳಿಯ ಉದ್ಯಮಿ ಶ್ರೀಧರ ಕೆ., ಅಗ್ನಿಶಾಮಕ ಠಾಣಾಧಿಕಾರಿ ಕೇಶವ ಉಪಸ್ಥಿತರಿದ್ದರು.
ಸಹಾಯಕ ಅಗ್ನಿಶಾಮಕ ಅಧಿಕಾರಿ ಟಿ. ಹರಿ, ಮೂಡುಬಿದರೆ ಠಾಣೆಯ ಅಗ್ನಿಶಾಮಕ ಸಿಬ್ಬಂದಿ ಸತೀಶ್ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಉದಯ ಕುಮಾರ್ ಸನ್ಮಾನ ಪತ್ರ ವಾಚಿಸಿದರು. ರೋಹನ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಸತೀಶ್ ವಂದಿಸಿದರು.