ವಿಟ್ಲ: ಬಾಡಿಗೆ ಮನೆಯಲ್ಲಿ ವಾಸ ವಿರುವ ಶಿಕ್ಷಕಿಯೊಬ್ಬರು ಸ್ನಾನ ಮಾಡು ವುದನ್ನು ಯುವಕನೊಬ್ಬ ವೆಂಟಿಲೇಟರ್ ಮೂಲಕ ಇಣುಕಿ ಮೊಬೈಲ್ನಲ್ಲಿ ವೀಡಿಯೋ ಮಾಡಿದ್ದು, ಈ ಬಗ್ಗೆ ವಿಚಾರಿಸಲು ಬಂದ ಮನೆ ಕೆಲಸದಾಕೆ ಮೇಲೆ ಮಾನಭಂಗಕ್ಕೆ ಯತ್ನಿಸಿದ ಘಟನೆ ಬೊಳಂತೂರು ಗ್ರಾಮದ ಬಂಗಾರ ಕೋಡಿ ಎಂಬಲ್ಲಿ ನಿನ್ನೆ ನಡೆದಿತ್ತು. ಪ್ರಕರಣದ ವಿಚಾರಣೆ ನಡೆಸಿದಾಗ ಈ ಪ್ರಕರಣದ ಹಿಂದೆ ಬ್ಲೂಫಿಲ್ಮ್ ಜಾಲ ಇದೆ ಎಂಬ ಪತ್ತೆಯಾಗಿದೆ.
ಪ್ರಕರಣದ ಪ್ರಮುಖ ಆರೋಪಿಯಾದ ಗೂಳೀ ಶಾಪಿ(24)ಯನ್ನು ಪೊಲೀಸರು ಬಂಧಿಸಿದ್ದರು. ಆದರೆ ಇಂದು ಬೋಲಂತೂರು ನಿವಾಸಿ ಅಬ್ದುಲ್ ನೌಷಾದ್ ಆಲಿಯಾಸ್ ಅಬ್ಬು ಎಂಬಾತನನ್ನು ಸಹ ಪೊಲೀಸರು ಬಂಧಿಸಿದ್ದು, ಈತ ಸಾಪ್ಟ್ ವೇರ್ ಫಿಲ್ಮ್ ಮೇಕರ್ ಎಂದು ತಿಳಿದುಬಂದಿದೆ. ಇದರ ಜೊತೆಗೆ ಇನ್ನೊಬ್ಬ ಪ್ರಮುಖ ಆರೋಪಿ ಉನಾಯಿಸ್ ಮದಕ ಎಂಬಾತನನ್ನೂ ಸಹ ಪೊಲೀಸರು ಬಂಧಿಸಿದ್ದಾರೆ.
ಹೊರ ಜಿಲ್ಲೆ ನಿವಾಸಿ, ಸ್ಥಳೀಯ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಮಹಿಳೆಯೊಬ್ಬರು ಗುರುವಾರ ರಾತ್ರಿ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಬೊಳಂತೂರು ಗ್ರಾಮದ ಅದ್ದು ಯಾನೆ ನೌಶಾದ್(24) ಎಂಬಾತ ಮನೆಯ ವೆಂಟಿಲೇಟರ್ ಮೂಲಕ ತನ್ನ ಮೊಬೈಲ್ನಲ್ಲಿ ಚಿತ್ರೀಕರಣ ಮಾಡುತ್ತಿದ್ದ. ಈ ಬಗ್ಗೆ ಗಮನಿಸಿದ ಶಿಕ್ಷಕಿ ತನ್ನ ಮನೆ ಕೆಲಸದಾಕೆಯಲ್ಲಿ ಹೊರಗಡೆ ನೋಡಲು ತಿಳಿಸಿದ್ದಾಳೆ. ಆಕೆ ನೋಡಿ ದಾಗ ಆತ ತನ್ನ ಕೈಯಲ್ಲಿದ್ದ ಬಟ್ಟೆಯೊಂದನ್ನು ಆಕೆಯ ಮುಖಕ್ಕೆ ಎಸೆದು ಬಳಿಕ ಆಕೆಯ ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಮಹಿಳೆ ಪೆÇಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಬೈಕ್ ನಲ್ಲಿ ಪರರಿಯಾಗುತ್ತಿದ್ದ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
