ಬಂಟ್ವಾಳ: ಅಕ್ರಮ ಮರಳು ಸಾಗಾಟಗಾರರಿಂದ ಗ್ರಾಮ ಕರಣೀಕನೊರ್ವನ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರ ಸಂಜೆ ಬಂಟ್ವಾಳ ತಾಲೂಕಿನ ನಂದಾವರ ಬಳಿ ನಡೆದಿದೆ. ಸಜೀಪ ಮೂಡ ಗ್ರಾಮದ ಗ್ರಾಮ ಕರಣೀಕ ತೌಫೀಕ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಮೂರು ಜನ ಲಾರಿ ಚಾಲಕರು ಮತ್ತು ಒರ್ವ ಮಾಲಕ ಸೇರಿ ಈ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನೇತ್ರಾವತಿ ನದಿಯ ನಂದಾವರ ಸಮೀಪ ಆಕ್ರಮವಾಗಿ ಮರಳು ತೆಗೆಯುವ ಲಾರಿಗಳನ್ನು ನಿಲ್ಲಿಸಿ ಅವರ ಬಳಿ ಪರ್ಮಿಟ್ ಕೇಳಿದಕ್ಕೆ ಗ್ರಾಮ ಕರಣೀಕ ತೌಫೀಕ್ ಮೇಲೆ ಲಾರಿ ನಂ. ಕೆ.ಎ. 12ಎ.9192, ಕೆ.ಎ. 12ಬಿ.0146 ಮತ್ತು ಕೆ.ಎ.9988 ಲಾರಿಗಳ ಚಾಲಕರು ಮತ್ತು ಪಕ್ಕದಲ್ಲಿ ಕಾರಿನಲ್ಲಿ ಕುಳಿತಿದ್ದ ಮಾಲಕ ಸೇರಿದಂತೆ ನಾಲ್ಕು ಜನ ತೌಫೀಕ್ನನ್ನು ಅವ್ಯಾಚ್ಚ ಶಬ್ದಗಳಿಂದ ಬೈದುದಲ್ಲದೆ ಅವನ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರು ನೀಡಿದ್ದಾರೆ. ನಗರ ಠಾಣಾ ಪೋಲಿಸರು ಪ್ರಕರಣ ದಾಕಲಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಗ್ರಾಮ ಕರಣಿಕನಿಗೆ ಮರಲುಗಾರಿಕೆಯ ಪರ್ಮಿಟ್ ಕೇಳುವ ಅಧಿಕಾರ ಇದೆಯೋ ಎನ್ನುವ ಪ್ರಶ್ನೆ ಕೂಡಾ ಇಲ್ಲಿ ಬರುತ್ತದೆ. ಯಾಕೆಂದರೆ ಮೇಲಾಧಿಕಾರಿಗಳ ಅದೇಶ ಇಲ್ಲದೆ ಇವರು ದಾಲಿ ನಡೆಸುವಂತಿಲ್ಲ ಮತ್ತು ಸ್ಥಳೀಯ ಪೋಲಿಸ್ ಅಧಿಕಾರಿಗಳ ಗಮನಕ್ಕೆ ತಂದು ದಾಲಿ ಮಾಡಬೇಕುಎನ್ನು ಸೂಚನೆ ಇದ್ದರೂ ಇವರು ಒಬ್ಬರೇ ಕೇಳಿ ಹಲ್ಲೆಗೊಳಗಾಗಿದ್ದಾರೆ.

ಅಕ್ರಮ ಮರಳುಗಾರಿಕೆ: ಮರಳು ಗಾರಿಕೆಗೆ ಸರಕಾರ ನಿಷೇದ ಹೇರಿದಿದ್ದರೂ ಕೂಡಾ ಬಂಟ್ವಾಳದ ನೇತ್ರಾವತಿ ತಟದಲ್ಲಿ ಮಾತ್ರ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿತ್ತು. ಹಿರಿಯ ಸರಕಾರಿ ಅಧಿಕಾರಿಗಳ ಒಳ ಒಪ್ಪಂದದಲ್ಲಿ ನಡೆಯುತಿತ್ತು ಎನ್ನುವುದು ಇಲ್ಲಿಯ ಸಾರ್ವಜನಿಕರಿಗೆ ಗೊತ್ತಿರುವ ವಿಷಯ. ಹಾಗಾಗಿ ಯಾರು ಕೂಡಾ ಮರಳುಗಾರಿಕೆಗೆ ವಿರೋದ ವ್ಯಕ್ತಪಡಿಸುವ ಗೋಜಿಗೆ ಹೋಗಿರಲಿಲ್ಲ.ಕೆಲ ದಿನಗಳ ಹಿಂದೆ ಸಹಾಯಕ ಆಯುಕ್ತರವರು ಈ ಮರಳುಗಾರಿಕೆಯ ಮೇಲೆ ದಾಳಿ ನಡೆಸಿದ್ದರು. ಅನಂತರ ಅದು ಮತ್ತೆ ಅದೇ ಎಗ್ಗಿಲ್ಲದೆ ನಡೆಯುತ್ತಿತ್ತು. ಇತ್ತೀಚೆಗೆ ಅಕ್ರಮ ಮರಳುಗಾರಿಕೆಯನ್ನು ತಡೆದು ಕೇಸು ದಾಖಲಿಸಿದ ಪೋಲಿಸ್ ಅಧಿಕಾರಿಯನ್ನು ಎತ್ತಂಗಡಿ ಮಾಡಿದ್ದಾರೆ. ಎ.ಎಸ್.ಪಿ.ಯಾಗಿ ಬಂದ ಇಲ್ಲಿನ ರಾಹುಲ್ ಕುಮಾರ್ ಅಕ್ರಮ ಮರಳು ಲಾರಿಗಳನ್ನು ಹಿಡಿದಾಗ ಅವರ ಮೇಲೂ ಜನಪ್ರತಿನಿದಿಗಳು ಕೆಂಗಣ್ಣು ಬೀರಿದಲ್ಲದೆ ಮೇಲಾಧಿಕಾರಿ ಇನ್ನು ಮುಂದೆ ಮರಳು ಗಾರಿಕೆ ನಮ್ಮ ಇಲಾಖೆಗೆ ಸಂಬಂದ ಪಟ್ಟದಲ್ಲ ಅದು ಗಣಿಕಾರಿಕೆ ಇಲಾಖೆಗೆ ಎಂದು ಹೇಳಿ ಪೋಲಿಸರ ಕೈ ಕಟ್ಟಿದ್ದರು.