ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬೋಳಂತೂರು ಸಮೀಪದ ನಾರ್ಶ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕಿಯೊಬ್ಬರು ಬಾಡಿಗೆ ಮನೆಯ ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿರುವ ದೃಶ್ಯವನ್ನು ಕಿಟಕಿ ಮೂಲಕ ಮೊಬೈಲ್ನಲ್ಲಿ ಚಿತ್ರೀಕರಿಸಿ ಕೆಲಸದಾಕೆಯನ್ನು ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿರುವ ಕಿಡಿಗೇಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಇದೇ 12ರಂದು ಬೆಳಿಗ್ಗೆ ಬೋಳಂತೂರು-ಕೊಕ್ಕಪುಣಿ-ನಾರ್ಶ ಮೈದಾನ ತನಕ ಭಾರೀ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.
ಬಂಟ್ವಾಳ ಎಪಿಎಂಸಿ ಮಾಜಿ ಅಧ್ಯಕ್ಷ ನೇಮಿರಾಜ ರೈ ಅವರು ಬುಧವಾರ ಸಂಜೆ ಬಿ.ಸಿ.ರೋಡ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು. ಈಗಾಗಲೇ ಇಲ್ಲಿನ ನಾರ್ಶ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾಭಿವೃದ್ದಿ ಸಮಿತಿ ಸಭೆ ಕರೆದು ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪೊಲೀಸರಿಗೆ ಮನವಿ ಸಲ್ಲಿಸಲಾಗಿದೆ.
ಈ ಕಿಡಿಗೇಡಿ ಕೃತ್ಯದಿಂದ ಆಘಾತಗೊಂಡಿರುವ ಶಿಕ್ಷಕಿಗೆ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಮತ್ತು ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಧಾವಿಸಿ ಬಮದು ಧೈರ್ಯ ತುಂಬಿದ್ದಾರೆ.
ಮುಸ್ಲಿಂ ಬಾಹುಳ್ಯ ಹೊಂದಿರುವ ಬೋಳಂತೂರು ಗ್ರಾಮದಲ್ಲಿ ಸುಮಾರು ಐದು ಸಾವಿರ ಮಂದಿ ಹಿಂದೂ-ಮುಸ್ಲಿಂ ಪರಸ್ಪರ ಸೌಹಾರ್ದತೆ ಕಾಯ್ದುಕೊಂಡಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕೆಎಫ್ಡಿ ಮತ್ತಿತರ ಸಂಘಟನೆಗೆ ಸೇರಿದ ಕೇವಲ 25ರಷ್ಟು ಮಂದಿ ಸಮಾಜದಲ್ಲಿ ಸ್ವಾಸ್ಥ್ಯ ಕದಡಲು ಶ್ರಮಿಸುತ್ತಿದ್ದಾರೆ. ಭೂಗತ ನಂಟಿನಿಂದ ಹಿಡಿದು ಭಯೋತ್ಪಾದನಾ ಕೃತ್ಯದವರೆಗೂ ಇವರು ನಂಟು ಬೆಳೆಸಿಕೊಂಡಿದ್ದು, ನಿರಂತರವಾಗಿ ಗೋಹತ್ಯೆ, ಅಕ್ರಮ ಜಾನುವಾರು, ಮರ, ವಾಹನ ಕಳ್ಳ ಸಾಗಾಟ, ಬೆದರಿಕೆ, ಮತಾಂತರ, ಮಹಿಳೆಯರ ಚುಡಾವಣೆ, ಅತ್ಯಾಚಾರ ಮತ್ತು ಅಪಹರಣ ಮತ್ತಿತರ ದುಷ್ಕøತ್ಯ ನಡೆಯುತ್ತಿದೆ. ಈ ಬಗ್ಗೆ ವಿಟ್ಲ ಪೊಲೀಸರಿಗೆ ದೂರಿಕೊಮಡರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಯರಾಮ ರೈ, ವೆಂಕಟರಮಣ ಬಳ್ಕುರಾಯ, ಸುಧಾಕರ ರೈ, ಬಜರಂಗದಳ ಸಂಚಾಲಕ ದೀಕ್ಷಿತ್ ಮತ್ತಿತರರು ಇದ್ದರು.