ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ನೂತನ ಕುಟೀರ ನಿರ್ಮಾಣ ಕಾಮಗಾರಿಗೆ ವಿರಾಜಪೇಟೆ ಅರಮೇರಿ ಕಳಂಚೇರಿ ಮಠ ಶಾಂತಮಲ್ಲ ಮಲ್ಲಿಕಾರ್ಜುನ ಸ್ವಾಮೀಜಿ ಬುಧವಾರ ಶಿಲಾನ್ಯಾಸ ನೆರವೇರಿಸಿದರು.

ಡಾ.ಕೆ.ಪ್ರಭಾಕರ ಭಟ್, ಉದ್ಯಮಿ ರಶ್ಮಿ ರಂಗಮೂರ್ತಿ , ಜನಾರ್ದನ, ವೀರೇಶ್, ಶಿವಗಿರಿ ಸತೀಶ್ ಭಟ್, ಡಾ.ಕಮಲಾ ಪ್ರಭಾಕರ ಭಟ್, ಬಿ.ನಾರಾಯಣ ಸೊಮಯಜಿ, ಮುಖ್ಯಶಿಕ್ಷಕ ವಸಂತ ಮಾಧವ, ರವಿರಾಜ ಕಣಂತೂರು ಮತ್ತಿತರರು ಇದ್ದರು.