ಬಂಟ್ವಾಳ: ಬಂಟ್ವಾಳ ತಾಲ್ಲೂಕಿನಲ್ಲಿ ಕಳೆದ 34 ವರ್ಷಗಳ ಹಿಂದೆ ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪ ಇವರ ನೇತೃತ್ವದಲ್ಲಿ ಆರಂಭಗೊಂಡ ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಗೆ ಭಾನುವಾರ ಇದೇ ಪ್ರಥಮ ಬಾರಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಸದಸ್ಯ ಸುರೇಶ್ ಕುಲಾಲ್ ನೇತೃತ್ವದ 14ಮಂದಿ ಹೊಸ ಮುಖಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಬ್ಯಾಂಕಿನ ಹಾಲಿ ಅಧ್ಯಕ್ಷ ದಯಾನಂದ ಬೆಳ್ಳೂರು ಇವರು ಮಾತ್ರ ಒಟ್ಟು 628 ಮತ ಗಳಿಸಿ ಗೆಲುವು ಸಾಧಿಸಿದ್ದು, ಉಳಿದಂತೆ ಎಲ್ಲಾ ಹಿರಿಯ ಘಟಾನುಘಟಿಗಳು ಪರಾಭವಗೊಂಡಿದ್ದಾರೆ.
ಬಂಟ್ವಾಳ ಪುರಸಭೆ ಮಾಜಿ ಸದಸ್ಯ ಸುರೇಶ್ ಕುಲಾಲ್(724), ಅರುಣ್ ಕುಮಾರ್ ಸಜಿಪ(730), ಪದ್ಮನಾಭ ವಿಟ್ಲ (706), ಲೋಕನಾಥ ಡಿ.(705), ವಾಮನ ಟೈಲರ್ ಮೊಗರ್ನಾಡ್ (667), ವಿನಾಯಕ ಬಿ.ಸಿ.ರೋಡ್(646), ವಿಶ್ವನಾಥ ಕೆ.ಬಿ. ಮಂಗಳೂರು (704), ಹೇಮಂತ್ ಸಾಲ್ಯಾನ್ ಜಕ್ರಿಬೆಟ್ಟು (646), ಜನಾರ್ಧನ ಕುಲಾಲ್ ಬೊಂಡಾಲ(845), ವಿಜಯ ಕುಮಾರ್ ವಿಟ್ಲ(665), ಜಯಂತಿ ಕಲ್ಲಡ್ಕ(696), ವಿದ್ಯಾ ನಾವೂರ(625), ವಿಜಯಲಕ್ಷ್ಮೀ ವಿಟ್ಲ(773), ಇವರು ಗೆಲುವು ಸಾಧಿಸಿದ್ದಾರೆ.

By suddi9

Leave a Reply

Your email address will not be published. Required fields are marked *