ಬಂಟ್ವಾಳ: ಬಂಟ್ವಾಳ  ತಾಲ್ಲೂಕಿನ ಬಿ.ಸಿ.ರೋಡ್ ತಾಲ್ಲೂಕು ಪಂಚಾಯಿತಿ ಹಳೆ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಆಧಾರ ನೋಂದಣಿ ಕೇಂದ್ರದಲ್ಲಿ ಯಾವುದೇ ಮುನ್ಸೂಚನೆ ನೀಡದೆ ನೌಕರರಿಬ್ಬರು ಕೊಠಡಿಗೆ ಬೀಗ ಜಡಿದ ಘಟನೆ ಸೋಮವಾರ ನಡೆದಿದೆ. ಇದರಿಂದಾಗಿ ಹೆಸರು ನೋಂದಣಿ ಮತ್ತು ಭಾವಚಿತ್ರ ತೆಗೆಸಲು ಬಂದಿದ್ದ ಹಲವಾರು ಮಂದಿ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

 

16btl-Adharಈ ಗೊಂದಲ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆಯೇ ನಗರ ಠಾಣೆ ಪೊಲೀಸರು ಧಾವಿಸಿ, ಉಪ ತಹಶೀಲ್ದಾರ್ ರೋಹಿನಾಥ್ ಅವರಿಗೆ ಮಾಹಿತಿ ರವಾನಿಸಿದರು. ಇದೇ ವೇಳೆ ನೂಕು ನುಗ್ಗಲು ಉಂಟಾಗಿದ್ದು, ಉಪತಹಶೀಲ್ದಾರ್ ಉಪಸ್ಥಿತಿಯಲ್ಲಿ ಮತ್ತೆ ನೋಂದಣಿ ಕಾರ್ಯ ಪುನರಾರಂಭಗೊಂಡಿತು. ಕಳೆದ ಎರಡು ವಾರಗಳ ಹಿಂದೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಇಲ್ಲಿನ ಅವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

By suddi9

Leave a Reply

Your email address will not be published. Required fields are marked *