ಬಂಟ್ವಾಳ; ಖಾಸಗಿ ಜಮೀನೊಂದರಲ್ಲಿ ಬಾಯ್ದೆರೆದು ಕೊಂಡಿರುವ ಪಾಳು ಬಾವಿಯೊಂದು ಜೀವ ಬಲಿ ಪಡೆಯಲು ಹವಣಿಸುತ್ತಿರುವ ವಿದ್ಯಮಾನ ನಾವೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

DSC_6127ಇಲ್ಲಿನ ಮಣಿಹಳ್ಳ-ಸರಪಾಡಿ ಮುಖ್ಯರಸ್ತೆಗೆ ತಾಗಿಕೊಂಡಿರುವ ಈ ಪಾಳು ಬಾವಿಯ ಹತ್ತಿರದಲ್ಲೇ ನಾವೂರು ವಿಷ್ಣಮೂರ್ತಿ ದೇವಸ್ಥಾನವಿದೆ. ಈ ಪಾಳು ಬಾವಿಯ ಸುತ್ತ ಮುತ್ತ ಹುಲ್ಲು ಗಿಡಗಳು ಬೆಳದು ನಿಂತಿದ್ದು, ಸೋಮವಾರ ನಡೆದ ಸ್ವಚ್ಛತಾ ಆಂದೋಲನದ ವೇಳೆ ಈ ಪಾಳು ಬಾವಿ ಸಾರ್ವಜನಿಕರ ಗಮನಸೆಳೆದಿದ್ದು, 25 ಅಡಿ ಆಳದ ಈ ಬಾವಿಯನ್ನು ತಕ್ಷಣವೇ ಮುಚ್ಚಬೇಕು, ಅಥವಾ ಸುತ್ತ ತಡೆಗೋಡೆ ಕಟ್ಟಬೇಕೆಂದು ಆಗ್ರಹಿಸಿದ್ದಾರೆ. ಬಾವಿ ಇರುವ ಈ ಖಾಲಿ ಸ್ಥಳದಲ್ಲಿ ಸಂಜೆ ವೇಳೆಗೆ ಸ್ಥಳೀಯ ಯುವಕರು ಕ್ರಿಕೆಟ್ ಆಟ ಆಡುತ್ತಿದ್ದು, ಈ ಪಾಳು ಬಾವಿಯಿಂದ ಅಪಾಯ ಸಂಭವಿಸುವ ಮುನ್ನ ಗ್ರಾಮಪಂಚಾಯತ್ ಎಚ್ಚೆತ್ತುಕೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ

By suddi9

Leave a Reply

Your email address will not be published. Required fields are marked *