ಶ್ರೀನಗರ: ಕೆಲವೇ ತಿಂಗಳ ಹಿಂದೆ ವಿನಾಶಕಾರಿ ಪ್ರವಾಹದಿಂದ ತತ್ತರಿಸಿದ್ದ ಜಮ್ಮು ಕಾಶ್ಮೀರಕ್ಕೆ ಇದೀಗ ಮತ್ತೆ ನೆರೆಯು ಶಾಪವಾಗಿ ಕಾಡಲಾರಂಭಿಸಿದೆ. ರಾಜ್ಯಾದ್ಯಂತ ಜಡಿ ಮಳೆ ಸುರಿಯುತ್ತಿರುವುದರಿಂದ ಎಲ್ಲೆಡೆ ಪ್ರವಾಹ ಭೀತಿ ಉಲ್ಬಣಿಸಿದೆ. ಈ ಮಳೆ ಮುಂದಿನ ನಾಲ್ಕೈದು ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಕಾಶ್ಮೀರದಲ್ಲಿನ ವಿನಾಶಕಾರಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿ ಸಮರೋಪಾದಿಯ ಪರಿಹಾರೋಪಾಯಗಳನ್ನು ಚುರುಕುಗೊಳಿಸಲು ಕೇಂದರ ಸಚಿವ ಮುಖ್ತಾರ್‌ ಅಬ್ಟಾಸ್‌ ನಕ್ವಿ ಅವರನ್ನು ಜಮ್ಮು ಕಾಶ್ಮೀರಕ್ಕೆ ತಮ್ಮ ವಿಶೇಷ ಪ್ರತಿನಿಧಿಯಾಗಿ ಕಳುಹಿಸಿದ್ದಾರೆ.

13-srinagara

ಪಂಜಾಬ್‌ನ ಭಟಿಂಡಾದಿಂದ ಪರಿಹಾರ ಸಾಮಗ್ರಿಗಳನ್ನು ತುಂಬಿಕೊಂಡ ಐಎಎಫ್ ವಿಮಾನವು ಇದೀಗ ಜಮ್ಮು ಕಾಶ್ಮೀರದತ್ತ ಸಾಗುತ್ತಿದೆ.

ಕಾಶ್ಮೀರದ ಬಡಗಾಂ ಜಿಲ್ಲೆಯ ಛದೂರಾ ಪ್ರದೇಶದಿಲ್ಲ ತೀವ್ರ ಮಳೆಗೆ ಎರಡು ಮನೆಗಳು ನೆಲದೊಳಗೆ ಕುಸಿದಿದ್ದು ಇಲ್ಲಿ ಸುಮಾರು 16 ಮಂದಿ ಸಿಕ್ಕಿ ಹಾಕಿಕೊಂಡಿದ್ದಾರೆ.

ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ರಾಜ್ಯವು ಎದುರಿಸಿದ್ದ ಮಹಾ ಪ್ರವಾಹದ ವಿನಾಶಕಾರಿ ಪರಿಸ್ಥಿತಿಯು ಈ ಬಾರಿ ಪುನರಾವರ್ತನೆಯಾಗದಿರಲೆಂದು ನಾನು ಹಾರೈಸಿ ದೇವರಲ್ಲಿ ಅಂತೆಯೇ ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಉಮರ್‌ ಅಬ್ದುಲ್ಲಾ ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಮಹಾ ನಿರ್ದೇಶಕ ಓ ಪಿ ಸಿಂಗ್‌ ಅವರು ಪ್ರವಾಹ ಪೀಡಿ ಪ್ರದೇಶಗಳಲ್ಲಿ ತುರ್ತಾಗಿ ಕಾರ್ಯಾಚರಣೆ ನಡೆಸಲು ನಾಲ್ಕು ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಜನರು ಭೀತಿ ಪಡಕೂಡದು ಎಂದು ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *