ಮೂಡುಬಿದಿರೆ: `ಇನ್ಕ್ರೆಡಿಬಲ್ ಇಂಡಿಯಾ’ ಎನ್ನುವ ಥೀಮ್ನೊಂದಿಗ್ರೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂರು ದಿವಸ ನಡೆಯುವ ಚಕ್ರವ್ಯೂಹ 2015′ ರಾಷ್ಟೀಯ ಮಟ್ಟದ ಅಂತರ್ ಕಾಲೇಜು ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವಕ್ಕೆ ಬಹುಬಾಷ ಚಿತ್ರನಟ, ನಿರ್ದೇಶಕ ಪ್ರಕಾಶ್ ರಾಜ್ ಶನಿವಾರ ಚಾಲನೆ ನೀಡಿ ಮಾತನಾಡಿದರು.
ನಂತರ ಮಾತನಾಡಿದ ಅವರು.ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ, ಆಯಾ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ಮುಖ್ಯ. ಅದರೊಂದಿಗೆ ಪ್ರತಿಭೆ, ಅಧ್ಯಯನ, ನಾಯಕತ್ವದ ಗುಣವಿದ್ದರೆ ಸುಂದರ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಇಂತಹ ಉತ್ಸವಗಳು ಜೀವನಕ್ಕೆ ಪೂರಕ. ಈ ಮೂಲಕ ಉತ್ತಮ ನಾಗರಿಕನಾಗಿ ಜೀವನ ಸಾರ್ಥಕವಾಗಿಸಬಹುದು ಎಂದು ಹೇಳಿದರು.
ಆಳ್ವಾಸ್ ಸಂಸ್ಥೆ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದರು. ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ವಿದ್ಯಾರ್ಥಿ ಸಂಯೋಜಕರಾದ ಕೀರ್ತಿ , ಆಶಿಶ್ ಸುವರ್ಣ ಉಪಸ್ಥಿತರಿದ್ದರು.
ಅಲೆಕ್ಸಾಂಡರ್ ಮಾಥ್ಯು ಕಾರ್ಯಕ್ರಮ ನಿರೂಪಿಸಿದರು. ಸಂಯೋಜಕ ಪ್ರೊ.ಮಂಜುನಾಥ ಕೊಠಾರಿ ವಂದಿಸಿದರು.
mbd_april11_1 (2)

mbd_april11_1 (3)

  • mbd_april11_1 (1)
    18 ಸ್ಥಳಗಳಲ್ಲಿ ಸ್ಪರ್ಧೆ :
    3 ದಿನಗಳ ಕಾಲ ನಡೆಯುವ ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ 24 ವಿಭಾಗಗಳ ಸುಮಾರು 200 ಕ್ಕೂ ಹೆಚ್ಚು ಸ್ಪರ್ಧೆಗಳು 18 ಸ್ಥಳಗಳಲ್ಲಿ ಪ್ರದರ್ಶಿ ತಗೊಳ್ಳುತ್ತಿದೆ. ಚಕ್ರವ್ಯೂಹ ಉತ್ಸವದ ಸ್ಪರ್ಧೆಗಳನ್ನು ಎಲ್ಲ ಶ್ರೇಣಿಯ ವಿದ್ಯಾರ್ಥಿಗಳಿಗೋಸ್ಕರ ಎರ್ಪಡಿಸಿದ್ದು- ಪದವಿ, ಸ್ನಾತಕೊತ್ತರ, ಎಂಜಿನಿಯರಿಂಗ್, ಉದ್ಯಮಶೀಲತಾ ಮತ್ತು ಆಡಳಿತ, ಪ್ಯಾರ ಮೆಡಿಕಲ್, ಮೆಡಿಕಲ್, ಹೊಮಿಯೋಪತಿ, ನ್ಯಾಚುರೋಪತಿ ಹಾಗೂ ಕಾನೂನು ವಿದ್ಯಾರ್ಥಿಗಳಿಗೂ ಭಾಗವಹಿಸುತ್ತಿದ್ದಾರೆ.
    ಚಕ್ರವ್ಯೂಹದ ವಿಶೇಷತೆಗಳು:
    ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 3 ದಿನಗಳ ಕಾಲ ನಡೆಯುವ ಆಳ್ವಾಸ್ ಚಕ್ರವ್ಯೂಹ-2013 ತಾಂತ್ರಿಕ-ಸಾಂಸ್ಕೃತಿಕ ಉತ್ಸವದ ಮೊದಲ ದಿನ ಉದ್ಘಾಟನಾ ಸಮಾರಂಭದ ಬಳಿಕ 18 ಸ್ಥಳಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಿತು. ಉತ್ಸವದ ಜೊತೆಗೆ ಸಾಂಪ್ರದಾಯಿಕ ದಿನಾಚರಣೆಯನ್ನು ಹಮ್ಮಿಕೊಂಡಿರುವುದರಿಂದ ವಿವಿಧ ಪ್ರದೇಶಗಳಿಂದ ಬಂದಂತಹ ವಿದ್ಯಾರ್ಥಿಗಳು ತಮ್ಮ ರಾಜ್ಯದ, ಜಿಲ್ಲೆಯ ಸಾಂಪ್ರಾಯಿಕ ಉಡುಗೆಯಲ್ಲಿ ಕಂಡುಬಂದರು. ಸಾಂಪ್ರಾದಾಯಿಕ ಆಹಾರ ಖಾದ್ಯಗಳ ಪ್ರದರ್ಶನವೂ ನಡೆಯಿತು. ಆಳ್ವಾಸ್ ವಿದ್ಯಾರ್ಥಿಗಳು ಭಾರತದ ನಾಲ್ಕು ತಂಡಗಳಾಗಿ (ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಇತರ ಭಾರತ ಹಾಗೂ ಈಶಾನ್ಯ ಭಾರತ) ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೇದಿಕೆ ಮೇಲೆ ಪ್ರದರ್ಶಿಸಿದರು. ಸಂಪ್ರದಾಯಿಕವಾಗಿ ಶೃಂಗಾರಗೊಂಡ ಕಾಲೇಜಿನ ಕ್ಯಾಂಪಸ್ನಲ್ಲಿ ಸಂಪ್ರದಾಯಿಕ ಧಿರಿಸು ಧರಿಸಿದ ವಿದ್ಯಾರ್ಥಿಗಳಿಂದ ಹಬ್ಬದ ವಾತಾವರಣ ನಿಮಾರ್ಣವಾಯಿತು.
    ತಾಂತ್ರಿಕ ಕಾಲೇಜುಗಳಲ್ಲಿ ಹೊಸ ಅನ್ವೇಷಣೆಗಳು, ಅವುಗಳ ಪ್ರದರ್ಶನ ಸಹಜ. ಆದರೆ ಆಳ್ವಾಸ್ ಚಕ್ರವ್ಯೂಹದಲ್ಲಿ ಹೊಸನಗರದ ಸುನೀಲ್ ಅವರ ಸಂಗ್ರಹದಲ್ಲಿರುವ ಹಳೆಯ ಗ್ರಾಮಫೋನ್, ಗಡಿಯಾರ ಸಹಿತ ವಿವಿಧ ಪರಿಕರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. 200 ವರ್ಷಗಳ ಹಿಂದೆ ಇಂಗ್ಲಂಡ್, ಭಾರತದಲ್ಲಿದ್ದ ಗ್ರಾಮ ಫೋನ್, ಗಡಿಯಾರ, ಟೈಪಿಂಗ್ ಮೆಶೀನ್, ಹಳೆಯ ಕ್ಯಾಮರ ಟೇಪ್ ರೆಕಾರ್ಡ್ಗಳ ವಿವಿಧ ಮಾದರಿಗಳು ಪ್ರದರ್ಶನದಲ್ಲಿದ್ದವು. 1760ರಲ್ಲಿ ಸೈನಿಕರು ಬಳಸುತ್ತಿದ್ದ ಬ್ಲೇಡ್ ಹರಿತಗೊಳಿಸುವ ಮೆಶೀನ್, ಗನ್ ಹುಡಿ ತುಂಬಿಸುವ 500 ವರ್ಷಗಳ ಹಿಂದಿನ ಪರಿಕರಗಳು ಪ್ರದರ್ಶನದಲ್ಲಿದ್ದವು. ಆಪಲ್ ಅವರ ಅತ್ಯಾಧುನಿಕ ತಂತ್ರಜ್ಞಾನದ ಕಂಪ್ಯೂಟರ್, ಮೊಬೈಲ್, ಲ್ಯಾಪ್ಟಾಪ್ಗಳು ಕೂಡ ಪ್ರದರ್ಶಿಸಲ್ಪಟ್ಟಿತು.
    ಉಪ್ಪುಗಳಿಗೆ ವಿವಿಧ ಬಣ್ಣ ಹಚ್ಚಿ, ಅದರಿಂದ ಕನರ್ಾಟಕಮಾತೆಯ ರಂಗೋಲಿ ಮನಮೋಹಕವಾಗಿತ್ತು. ವಿವಿಧ ನಾಗರಿಕತೆಯನ್ನು ತಿಳಿಸುವ ಮಣ್ಣಿನ ರಚನೆ, ಸ್ಮಾರ್ಟ್ ಸಿಟಿಯ ಪ್ರತಿಕೃತಿ, ಆ ಪ್ರತಿಕೃತಿಯ ನೆರಳು, ಗೋಡೆಯ ಮೇಲಿನ ಚಿತ್ರದಲ್ಲಿ ಪ್ರತಿಫಲನವಾಗಿ, `ನೆರಳು ಚಿತ್ರದಲ್ಲಿ ಬೀಡಿಸಿದ ರೀತಿಯಲ್ಲಿ ಕಾಣುವುದು ವಿಶೇಷವಾಗಿತ್ತು.
    ಕೋತಿರಾಜನ ಸಾಹಸ:
    ಜ್ಯೋತಿರಾಜ ಅಲಿಯಾಸ್ ಕೋತಿರಾಜನ `ಚಕ್ರವ್ಯೂಹ’ದಲ್ಲಿ ಕಟ್ಟಡ ಹತ್ತಿದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ 7 ಮಹಡಿ ಕಟ್ಟಡವನ್ನು ಸಲೀಸಾಗಿ ಹತ್ತಿ ಸಾಹಸ ಪ್ರದರ್ಶಿಸಿದರು. ಡಾ. ಸ್ನೆಕ್ ಶಾಮ್ `ಹಾವುಗಳ ಜತೆ ಜಿವನ’ -ಹಾವುಗಳ ಪ್ರಭೇದ ಮತ್ತು ಅವುಗಳ ಚಲನೆಯ ಬಗ್ಗೆ ಕಾರ್ಯಗಾರ ನಡೆಸಿಕೊಟ್ಟರು.
    ಎಲ್ಲ ವಿವಿಧ ವಿಭಾಗಗಳಲ್ಲಿ ತಾಂತ್ರಿಕ ಮತ್ತು ಇನ್ನಿತರ ಸ್ಪರ್ದಗಳನ್ನು ನಡೆಸಲಾಗಿದ್ದು ಇಂದು ಪ್ರಬಂದ ಮಂಡನೆ, ಕಂಪ್ಯೂಟರ್ ಗ್ರಾಫಿಕ್ಸ್, ಸಿ ಕೋಡಿಂಗ್, ಸಾಂಪ್ರದಾಯಿಕ ಸ್ಫರ್ಧೆ ಗಳಾದ ನಾಟಕ ಪ್ರಕಾರ(ರೂಪಕ, ವಿಡಂಬನ ರೂಪಕ, ಮೂಖಾಭಿನಯ), ಸಾಹಿತ್ಯಿಕ ಪ್ರಕಾರ(ಚರ್ಚೆ, ಭಾಷಣ, ಆಶುಬಾಷಣ), ನೃತ್ಯ ಪ್ರಕಾರ(ಶಾಸ್ತ್ರೀಯ, ಪಾಶ್ಚ್ಯಾತ್ಯ), ಹಾಡುಪ್ರಕಾರ(ಶಾಸ್ತ್ರೀಯ, ಪಾಶ್ಚ್ಯಾತ್ಯ), ವರ್ಣಚಿತ್ರಪ್ರಕಾರ(ಪೆನ್ಸಿಲ್ ಚಿತ್ರ ರಚನೆ, ಮೆಹಂದಿ) ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು.

By suddi9

Leave a Reply

Your email address will not be published. Required fields are marked *