ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಎ. 14ರಿಂದ 21ರ ತನಕ ವರ್ಷಾವಧಿ ಉತ್ಸವ ನಡೆಯಲಿದೆ.

ಎ. 14ರಂದು ಮಧ್ಯಾಹ್ನ ಧ್ವಜಾರೋಹಣ, ರಾತ್ರಿ ಉತ್ಸವ ಬಲಿ, ಎ. 15ರಂದು ಯುಗಾದಿ ದೀಪದ ಬಲಿ, ರಾತ್ರಿ ಉತ್ಸವ, ಎ. 16ರಂದು ಮೂಡು ಸವಾರಿ, ಎ. 17ರಂದು ದೀಪದ ಬಲಿ, ಎ. 18ರಂದು ಬೆಳ್ಳಿ ರಥೋತ್ಸವ, ಎ. 19ರಂದು ಪಡು ಸವಾರಿ, ಎ. 20ರಂದು ಹಗಲು ಬ್ರಹ್ಮರಥೋತ್ಸವ, ರಾತ್ರಿ ಬಲಿ ಶಯನ ಎ. 21ರಂದು ಪ್ರಾತಃ ಕವಾಟೋದ್ಘಾಟನೆ, ರಾತ್ರಿ ಅವಭೃತೋತ್ಸವ (ಆರಟ) ನಡೆಯಲಿದೆ.
ದಿನಂಪ್ರತಿ ಸಂಜೆ ಉತ್ಸವಾಂಗದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇಗುಲದ ಆನುವಂಶಿಕ ಮೊಕ್ತೇಸರ ವೆ| ಮೂ| ಕಟೀಲು ವಾಸುದೇವ ಆಸ್ರಣ್ಣ ಹಾಗೂ ಆಡಳಿತಾಧಿಕಾರಿ ನಿಂಗಯ್ಯ ತಿಳಿಸಿದ್ದಾರೆ.