ಬಂಟ್ವಾಳ: ಒಮ್ಮೆ ಮುಂಬಯಿಯಲ್ಲಿ ನಾಪತ್ತೆಯಾಗಿ, 14 ದಿನಗಳ ಬಳಿಕ ಮುಂಬೈಯಲ್ಲೇ ಪತ್ತೆಯಾಗಿದ್ದ ಬೆಳ್ತಂಗಡಿ ತಾಲೂಕು ಪುತ್ತಿಲ ಗ್ರಾಮದ ಕಾರ್ಪಾಡಿ ನಿವಾಸಿ ಸಫ್ವಾನ್ ಮತ್ತೆ ನಾಪತ್ತೆಯಾಗಿರುವ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತಿಲ ಗ್ರಾಮದ ಕಾರ್ಪಾಡಿ ನಿವಾಸಿ ಅಬೂಬಕ್ಕರ್ ಮತ್ತು ಅವರ ಮಗ ಸಪ್ವಾನ್(24) ಇಬ್ಬರೂ ಸೌದಿಯ ರಿಯಾದ್ ಎಂಬಲ್ಲಿ ಕೆಲಸ ಮಾಡಿಕೊಂಡಿದ್ದರು. ಆರು ತಿಂಗಳ ಹಿಂದೆ ಸೌದಿಯಲ್ಲಿ ಅಬೂಬಕ್ಕರ್ ಅವರ ಕೊಲೆಯಾಗಿರುತ್ತದೆ. ಈ ವಿಚಾರದಲ್ಲಿ ಸಪ್ವಾನ್ ಮಾನಸಿಕವಾಗಿ ನೊಂದಿದ್ದರು. ಸುಮಾರು 2 ತಿಂಗಳ ಹಿಂದೆ ಸಪ್ವಾನ್ ಸೌದಿಯಿಂದ ಹೊರಟು ಮುಂಬಯಿ ಏರ್ಪೊರ್ಟ್ಗೆ ಬಂದಿದ್ದ ವೇಳೆ ಮುಂಬಯಿಯಲ್ಲಿ ಕಾಣೆಯಾಗಿರುತ್ತಾರೆ. ಈ ಬಗ್ಗೆ ಮುಂಬಯಿಯ ಸಹರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಳಿಕ 14 ದಿನ ಕಳೆದು ಸಫ್ವಾನ್ ಮುಂಬಯಿಯಲ್ಲಿ ಪತ್ತೆಯಾಗಿದ್ದರು. ಬಳಿಕ ಅವರ ಸಂಬಂಧಿ ವಳಚ್ಚಿಲ್ ನಿವಾಸಿ ಕೆ.ವಿ.ಇಲ್ಯಾಸ್ ರವರು ಅವನನ್ನು ಊರಿಗೆ ಕರೆದುಕೊಂಡು ಬಂದು ಪುತ್ತಿಲ ಗ್ರಾಮದ ಕಾರ್ಪಾಡಿಯ ಅವನ ತಾಯಿ ಮನೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಸಿದ್ದರು. ಈ ನಡುವೆ ಎ.9ರಂದು ಬೆಳಗ್ಗೆ 9.30 ಗಂಟೆಗೆ ಅವನ ತಾಯಿ ಜೋಹಾರರಲ್ಲಿ ನಾನು ಬಾರ್ಯ ಪಂಚಾಯತ್ಗೆ ಹೋಗಿ ಆಧಾರ್ ಕಾರ್ಡ್ ಮಾಡಿಕೊಂಡು ಬರುತ್ತೇನೆಂದು ಹೋದ ಸಫ್ವಾನ್ ವಾಪಾಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಅತನನ್ನು ಪತ್ತೆ ಮಾಡಿಕೊಡಬೇಕೆಂದು ಸಂಬಂಧಿಕರಾದ ಇಲ್ಯಾಸ್ರವರು ಪೂಂಜಾಲಕಟ್ಟೆ ಠಾಣೆಯಲ್ಲಿ ಎ.18 ರಂದು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಚಹರೆ; ಕಾಣೆಯಾಗಿರುವವರ ಸಪ್ವಾನ್(24) 5.5 ಅಡಿ ಎತ್ತರ ವಿದ್ದು ಸಾಧಾರಣ ಮೈಕಟ್ಟು ಹೊಂದಿದ್ದಾರೆ, ಉದ್ದ ಮುಖ, ಬಿಳಿ ಮೈ ಬಣ್ಣ ಹೊಂದಿರುವ ಇವರು ಕನ್ನಡ, ಹಿಂದಿ, ಇಂಗೀಷ್, ಅರಬಿ, ಮಳಯಾಳಂ ಬಲ್ಲವರಾಗಿರುದ್ದು, ನಾಪತ್ತೆಯಾವುವ ವೇಳೆ ಬಿಳಿ ಶರ್ಟ್, ಕಪ್ಪು ಪ್ಯಾಂಟ್ ಧರಿಸಿರುತ್ತಾರೆ . ಇವರ ಬಗ್ಗೆ ಮಾಹಿತ ಇರುವವರು ಪುಂಜಾಲಕಟ್ಟೆ ಪೋಲೀಸ್ ಠಾಣೆ(08256-279375)ಗೆ ಮಾಹಿತಿ ನೀಡುವಂತೆ ಪೂಂಜಾಲಕಟ್ಟೆ ಪೊಲೀಸರು ತಿಳಿಸಿದ್ದಾರೆ.